Difference between revisions 672410 and 679048 on knwiki

{| border="1" cellpadding="2" cellspacing="0" align="right" width="250px" style="margin-left:10px"
|-
| align="center" colspan="2" | <font size="+1">'''ಮುಂಬಯಿ'''</font><br />
[[ಚಿತ್ರ:Gateway.jpg|thumb|none|ಗೇಟ್‍ವೇ ಅಫ್ ಇ೦ಡಿಯಾ]]
|- 
| ವರ್ಗೀಕರಣ
| ಮೆಟ್ರೊಪಾಲಿಟನ್ ನಗರ
|- 
| ದೇಶ
| [[ಭಾರತ]]
(contracted; show full)

ಮುಂಬಯಿಯಲ್ಲಿರುವ ಉಚ್ಚ ನ್ಯಾಯಾಲಯದ ವ್ಯಾಪ್ತಿ , ಕೇವಲ ಮಹಾರಾಷ್ಟ್ರ ರಾಜ್ಯಕ್ಕಷ್ಟೇ ಅಲ್ಲದೇ ಗೋವಾ ರಾಜ್ಯ , ಕೇಂದ್ರಾಡಳಿತ ಪ್ರದೇಶಗಳಾದ ದಮನ್,ದಿಯು , ದಾದ್ರ ಮತ್ತು ನಗರಹವೇಲಿ ಗಳಿಗೂ ಹಬ್ಬಿದೆ. ಇದಲ್ಲದೆ , ಸಿವಿಲ್ ಪ್ರಕರಣಗಳಿಗಾಗಿ ಸಣ್ಣ ವ್ಯಾಜ್ಯಗಳ ನ್ಯಾಯಾಲಯ (Small Causes Court) ಮತ್ತು ಕ್ರಿಮಿನಲ್ ಪ್ರಕರಣಗಳಿಗಾಗಿ ಸೆಷನ್ಸ್ ನ್ಯಾಯಾಲಯಗಳೂ ಇವೆ.

೬ ಜನ ಸಂಸತ್ತಿನಲ್ಲಿಯೂ, ೩೪ ಜನ ವಿಧಾನ ಮಂಡಲದಲ್ಲಿಯೂ ಮುಂಬಯಿಯನ್ನು ಪ್ರತಿನಿಧಿಸುತ್ತಾರೆ.
 
ಈಗ, [[ಶಿವಸೇನ ಪಕ್ಷ]], ಬಹುಮತದಿಂದ ಗೆದ್ದು ಆಯ್ಕೆಯಾಗಿದೆ. ಬೃಹನ್ ಮುಂಬ
ಯಿ ನಗರಪಾಲಿಕೆಯ ಅಧಿಕಾರವಹಿಸಿಕೊಂಡಿದೆ. ಇನ್ನು ನಾಲ್ಕು ವರೆ ವರ್ಷದ ಪ್ರಗತಿಕಾರ್ಯಗಳನ್ನೆಲ್ಲಾ, ಅದೇ ನಿರ್ವಹಿಸಬೇಕಾಗಿದೆ.
== ಸಂಚಾರ ವ್ಯವಸ್ಥೆ ==
ಮುಂಬಯಿಯ ನಾಗರೀಕರು ದೈನಂದಿನ ಸಂಚಾರೀ ಅಗತ್ಯಗಳಿಗೆ ಸರಕಾರೀ ಸಾರಿಗೆಯ ಮೇಲೆ ಬಹಳಷ್ಟು ಅವಲಂಬಿತರಾಗಿದ್ದಾರೆ. ರಸ್ತೆಗಳ ದುಸ್ಥಿತಿಯಿಂದ ಮತ್ತು ಪಾರ್ಕಿಂಗ್ ಮಾಡಲು ಸ್ಥಳದ ಅಭಾವದಿಂದ ಖಾಸಗೀ ವಾಹನಗಳು ಅಷ್ಟಾಗಿ ಜನಪ್ರಿಯವಾಗಿಲ್ಲ. ಆದರೂ ಈಚೀಚೆಗೆ, ಲೋಕಲ್ ರೈಲಿನಲ್ಲಿಯ ಸಹಿಸಲಸಾಧ್ಯ ಜನದಟ್ಟಣೆಯಿಂದ ಬೇಸತ್ತ ಜನ ಸ್ವಂತ ವಾಹನದ ಮೊರೆ ಹೋಗುವ ಪ್ರವೃತ್ತಿಯೂ ಕಾಣಬರುತ್ತಿದೆ. ಸುಮಾರು ೩೫ ಲಕ್ಷಜನ ಲೋಕಲ್ ರೈಲಿನಲ್ಲಿ ಪ್ರತಿದಿನ, ಪ್ರಯಾಣಮಾಡುತ್ತಾರೆಂಬ ದಾಖಲೆ ಇದೆ. ಲೋಕಲ್ ರೈಲುಗಳು ಮುಂಬ(contracted; show full)ಹೇಬ್ ಫಾಲ್ಕೆ ಪ್ರಶಸ್ತಿ ವಿಜೇತ]]', ಛಾಯಾಗ್ರಾಹಕ, [[ವಿ.ಕೆ.ಮೂರ್ತಿ]] ಇತ್ಯಾದಿ), ಸಾಹಿತ್ಯ [[ಅಮರ ಚಿತ್ರ ಕಥೆ|ಅಮರ ಚಿತ್ರ ಕಥೆಯನ್ನು]] ಪ್ರಾರಂಭಿಸಿದ [[ಅನಂತ ಪೈ]], ಕನ್ನಡ ಸಾಹಿತ್ಯದಲ್ಲಿ ಹೆಸರಾದ [[ವ್ಯಾಸರಾಯ ಬಲ್ಲಾಳ]], [[ಯಶವಂತ ಚಿತ್ತಾಲ]], [[ಜಯಂತ ಕಾಯ್ಕಿಣಿ]], [[ಮಿತ್ರಾ ವೆಂಕಟ್ರಾಜ್]] ಇತ್ಯಾದಿ), ನಾಟಕ [[ಗಿರೀಶ್ ಕಾರ್ನಾಡ್|ಗಿರೀಶ್ ಕಾರ್ನಾಡರು]] , [[ಅನಂತ ನಾಗ್]],[[ಶಂಕರ ನಾಗ್]] ಕೆಲಕಾಲ ಮುಂಬಯಿಯಲ್ಲಿದ್ದುದುಂಟು ), ಪತ್ರಿಕೋದ್ಯಮ [[ಎಂ. ವಿ. ಕಾಮತ್]], ಫ್ರೀ ಪ್ರೆಸ್ ಜರ್ನಲ್ ನ [[ಸದಾನಂದ್]], [[ಕರ್ನಾಟಕ ಮಲ್ಲ]] ಪತ್ರಿಕೆಯ,[[ಚಂದ್ರಶೇಖರ ಪಾಲೆತ್ತಾಡಿ]] ,ಮುಂತಾದವರು,ಮುಖ್ಯರು.

== [[ಮುಂಬ
ಯಿ ನಗರದ ಕನ್ನಡ ರಂಗಭೂಮಿ ಕಲಾವಿದರು]] ==
ಮುಂಬಯಿಯಲ್ಲಿ ಕನ್ನಡಿಗರ ಹಲವಾರು ಸಂಘ ಸಂಸ್ಥೆಗಳಿವೆ. ಅವುಗಳಲ್ಲಿ ಪ್ರಮುಖವಾದವುಗಳೆಂದರೆ, '[[ಮೈಸೂರ್ ಅಸೋಸಿಯೇಷನ್, ಮುಂಬಯಿ]], [[ಕರ್ನಾಟಕ ಸಂಘ]], ಮುಂಬಯಿಕನ್ನಡ ಸಂಘ, ಡೊಂಬಿವಲಿ ಕನ್ನಡಸಂಘ, ಗೋರೆಗಾಂ,ಮಲಾಡ್ ಹಾಗೂ ಕೋಟೆ ಕನ್ನಡ ಸಂಘಗಳು ಸೇರಿವೆ. ಇವೆಲ್ಲವೂ ತಮ್ಮದೇ ಆದ ದೊಡ್ಡ / ಸಣ್ಣ ಹರವಿನಲ್ಲಿ [[ಕನ್ನಡ ಭಾಷೆ]], ಸಂಸ್ಕೃತಿ, ಕಲೆ, ಕನ್ನಡತನವನ್ನು ಉಳಿಸಿ ಬೆಳೆಸುವಲ್ಲಿ ಶ್ರಮಿಸುತ್ತಿವೆ. ಕನ್ನಡ ರಂಗ ಭೂಮಿಯಲ್ಲಿ ಹಲವಾರು ಕಲಾವಿದರು ತಮ್ಮ ಅಮೂಲ್ಯವಾದ ಕೊಡುಗೆಯನ್ನು ಕೊಟ್ಟಿರುತ್ತಾರೆ. ಅವರಲ್ಲಿ ಪ್ರಮುಖರು, [[ಆರ್.ಡಿ ಕಾಮತ್]], ಶ್ರೀಪತಿ ಬಲ್ಲಾಳ್, ಕಿಶೋರಿ ಬಲ್ಲಾಳ್, [[ಸದಾನಂದ ಸುವರ್ಣ]], [[ಡಾ.ಬಿ.ಆರ್.ಮಂಜುನಾಥ್]], [[ಕೆ.ಮಂಜುನಾಥಯ್ಯ]],, [[ಬಾಲಕೃಷ್ಣ ನಿಡ್ವಣ್ಣಾಯ ಹಾಗೂ ಸತ್ಯಭಾಮಾ ನಿಡ್ವಣ್ಣಾಯ]] ದಂಪತಿಗಳು, (ದಿವಂಗತ)[[ಎ. ಎಸ್. ಕೆ ರಾವ್]], [[ಭರತ್ ಕುಮಾರ್ ಪೊಲಿಪು]], [[ಅಹಲ್ಯ ಬಲ್ಲಾಳ್]], ಸಾ ದಯಾ, ಶೈಲಿನಿ ರಾವ್, ಮೋಹನ್ ಮಾರ್ನಾಡ್, [[ಅವಿನಾಶ್ ಕಾಮತ್]], ಕುಸುಮ್ ಬಲ್ಲಾಳ್, ಮುಂತಾದವರು.

== ಮುಂಬಯಿ ನಗರವಾಸಿ ಮತ್ತು ಸಂಸ್ಕೃತಿ ==
ಮುಂಬಯಿ ನಗರವಾಸಿಗಳನ್ನು ಮುಂಬಯಿಕರ್ ಎಂದು ಸಂಬೋಧಿಸುವುದುಂಟು. ಮುಂಬಯಿಯ ನಾಗರೀಕರು , ದೈನಂದಿನ ಜೀವನದಲ್ಲಿ ಲೋಕಲ್ ರೈಲಿನ ಪ್ರಯಾಣ ಅವಿಭಾಜ್ಯ ಅಂಗವಾಗಿರುವುದರಿಂದ, ಸ್ವಂತ ಮನೆ ಕೊಳ್ಳುವಾಗ , ಆದಷ್ಟೂ ಲೋಕಲ್ ಸ್ಟೇಷನ್ನುಗಳ ಹತ್ತಿರವೇ ಹುಡುಕುತ್ತಾರೆ. ದೈನಂದಿನ ಜೀವನದಲ್ಲಿ , ಓಡಾಟದಲ್ಲಿ, ಗಡಿಯಾರದ ಮುಳ್ಳಿನಂತೆ ಮಗ್ನರಾಗಿರುವ ಮುಂಬಯಿಕರರಿಗೆ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಅವಕಾಶ ಕಡಿಮೆ. ಆದರೂ ಧಾರ್ಮಿಕ / ಸಾಮಾಜಿಕ ಚಟುವಟಿಕೆಗಳಾದ ಗಣೇಶ ಚತುರ್ಥಿಯೇ ಮೊದಲಾದ ಹಬ್ಬ ಹರಿದಿನಗಳನ್ನು ವಿಜೃಂಭಣೆ ಯಿಂದ, ಸಡಗರದಿಂದ, ಸಾಮೂಹಿಕವಾಗಿ ಆಚರಿಸುತ್ತಾರೆ. 
 
ಮುಂಬಯಿಯ ಖಾದ್ಯಸಂಸ್ಕೃತಿಯ ಸಂಕೇತವೆಂದರೆ [[ವಡಾಪಾವ್]] ಎನ್ನಬಹುದು. ಪಾನೀಪುರಿ, ಪಾವ್ ಭಾಜಿ, ಭೇಳ್ ಪುರಿ, ದಕ್ಣಿಣ ಭಾರತೀಯ, ಪಂಜಾಬೀ, ಚೈನೀಸ್ ತಿನಿಸುಗಳೂ ಮುಂಬಯಿ ಯಲ್ಲಿ ಬಹಳ ಜನಪ್ರಿಯವಾಗಿವೆ. [[ಶ್ರೀಕೃಷ್ಣ ಬಟಾಟವಡ ಅಂಗಡಿ, ದಾದರ್ (ಪ), ಮುಂಬಯಿ]], ದಾದರ್ ಪಶ್ಚಿಮ ದಲ್ಲಿದೆ. ಇಲ್ಲಿ ಬಿಸಿ-ಬಿಸಿ, ಬಟಾಟಾವಡ ತಿಂದು, ಚಹ- ಸೇವನೆಮಾಡುವ ಮಜವನ್ನು ಅನುಭವಿಸಬೇಕು.

[[UNESCO]] ಮುಂಬಯಿಗೆ ಮೂರು ಹೆರಿಟೇಜ್ ಪ್ರಶಸ್ತಿಗಳನ್ನು ಕೊಡಮಾಡಿದೆ. 
[[ಚಿತ್ರ:B 028.JPG|thumb|right|250px|'ಏಶಿಯಾಟಿಕ್ ಸೊಸೈಟಿಯ ಲೈಬ್ರೆರಿ']]
(contracted; show full)

ಮುಂಬಯಿಯ ಇತರ ಕ್ರೀಡೆಗಳೆಂದರೆ [[ಟೆನ್ನಿಸ್]], [[ಸ್ಕ್ವಾಶ್]], [[ಬಿಲಿಯರ್ಡ್ಸ್]], [[ಬ್ಯಾಡ್ಮಿಂಟನ್]], [[ಟೇಬಲ್ ಟೆನ್ನಿಸ್]] ಮತ್ತು [[ಗಾಲ್ಫ್]]. [[ರಗ್ಬೀ]] ಆಟ ಕಾಣಸಿಗುವ ಭಾರತದ ಕೆಲವೇ ಕೆಲವು ನಗರಗಳಲ್ಲಿ ಮುಂಬಯಿಯೂ ಒಂದು.[[ವಾಲಿಬಾಲ್]] ಮತ್ತು [[ಬ್ಯಾಸ್ಕೆಟ್ ಬಾಲ್]] ಕೂಡಾ ಶಾಲಾಕಾಲೇಜುಗಳಲ್ಲಿ ಜನಪ್ರಿಯವಾಗಿವೆ. ಕುದುರೆ ರೇಸಿನ ಪ್ರಿಯರಿಗಾಗಿ [[ಮಹಾಲಕ್ಷ್ಮಿ ರೇಸ್ ಕೋರ್ಸ್]] ಇದೆ. ಪ್ರತಿ ಫೆಬ್ರುವರಿಯಲ್ಲಿ ನಡೆಯುವ [[ಡರ್ಬಿ]] , ಭಾರತದ ಪ್ರತಿಷ್ಠಿತ ರೇಸುಗಳಲ್ಲಿ ಒಂದು.
== ಇದನ್ನೂ ನೋಡಿ ==
* [[ಪುರಾತನ ಮುಂಬ
ಯಿ ನಗರದ ಏಳು ದ್ವೀಪಗಳ ಭೂಭಾಗಗಳು]]

== ಹೆಚ್ಚಿನ ಮಾಹಿತಿಗಾಗಿ ==
* [[ಹೊರನಾಡ ಕನ್ನಡ ಸಂಸ್ಥೆಗಳು]]
* [http://www.mcgm.gov.in/ ಬೃಹನ್ ಮುಂಬಯಿ ಮಹಾನಗರಪಾಲಿಕೆಯ ಅಧಿಕೃತ ತಾಣ ]
* [http://theory.tifr.res.in/bombay/ ಮುಂಬಯಿ ಪುಟಗಳು: ಮುಂಬಯಿ ನಗರದ ಸಂಪೂರ್ಣ ಮಾರ್ಗದರ್ಶಿ - (ಟಾಟಾ ಮೂಲಭೂತ ಸಂಶೋಧನಾ ಸಂಸ್ಥೆಯಿಂದ)]
* [http://mdmu.maharashtra.gov.in/pages/Mumbai/mumbaiplanShow.php ಮುಂಬಯಿ ನಗರದ ಅಧಿಕೃತ ವರದಿ ] 
* [http://www.bombay-india.net/ ಮುಂಬಯಿ ನಗರ ಮಾರ್ಗದರ್ಶಿ ]
* [http://thegreatindian.tripod.com/mumbai.htm ಮುಂಬಯಿ ನಗರದ ಪಕ್ಷಿನೋಟ ( ಅಪರೂಪದ ಫೋಟೋ)]

{{ಭಾರತದ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ರಾಜಧಾನಿಗಳು}}

[[ವರ್ಗ:ಮಹಾರಾಷ್ಟ್ರದ ಪಟ್ಟಣಗಳು]]
[[ವರ್ಗ:ಭಾರತದ ಪಟ್ಟಣಗಳು]]
[[ವರ್ಗ:ಭೂಗೋಳ]]