Difference between revisions 736039 and 758699 on knwiki

[[File:Sacred lotus Nelumbo nucifera.jpg|thumb|ಪವಿತ್ರ ಕಮಲ ಪುಷ್ಪ (Nelumbo nucifera)]]
==ಒಳ್ಳೆಯ ಮಾತು==
*ಚೆನ್ನಾಗಿ ಆಡಿದ ಮಾತಿಗೆ ಸಂಸ್ಕೃತದಲ್ಲಿ ‘ಸುಭಾಷಿತ’ ಎನ್ನುತ್ತಾರೆ (ಸು:ಚೆನ್ನಾಗಿ, ಭಾಷಿತ:ಹೇಳಿದ್ದು). ‘ಚೆನ್ನಾಗಿ’ ಎಂದರೆ ಕೇಳುವುದಕ್ಕೆ ಇಂಪಾಗಿಯೋ, ಸುಂದರವಾದ ಪದಗಳನ್ನು ಪೋಣಿಸಿರುವುದೋ ಅಥವಾ ಆಕರ್ಷಕವಾಗಿಯೋ ಆಡಿದ್ದು. ಮತ್ತು ಬದುಕನ್ನು ಸಾರವನ್ನು ಸುಂದರವಾಗಿ, ಅರ್ಥಪೂರ್ಣವಾಗಿ ನೋಡಿ ಹೇಳಿದ ವಿವೇಕದ ವಚನ.
*ಹೀಗಾಗಿಯೇ ಸಂಸ್ಕೃತದಲ್ಲಿ ‘ಸುಭಾಷಿತ’ ಎಂಬ ವಿಶಿಷ್ಟ ಸಾಹಿತ್ಯಪ್ರಕಾರವೇ ಅಪಾರವಾಗಿ ಬೆಳೆದಿದೆ. ಸುಭಾಷಿತಗಳ ಬಗ್ಗೆ ‘ಸುಭಾಷಿತರತ್ನಭಾಂಡಾಗಾರ’ದ ಮಾತೊಂದು ಹೀಗಿದೆ:
(contracted; show full)::ವಿದ್ಯಾ ದಧಾತಿ ವಿನಯಂ, ವಿನಯಾದ್ಯಾತಿ ಪಾತ್ರತಾಂ|
::ಪಾತ್ರತ್ವಾ ಧನಮಾಪ್ನೋತಿ, ಧನದ್ಧರ್ಮಂ ತತಃ ಸುಖಂ||
*ವಿದ್ಯೆಯಿಂದ ವಿನಯಗುಣವು ಬರುವುದು. ವಿನಯಗುಣದಿಂದ ಸಮಾಜದಲ್ಲಿ ಯೋಗ್ಯತೆ, ಗೌರವ ಸಿಗುವುದು. ಅದರಿಂದ ಸಂಪತ್ತು ಗಳಿಕೆಯಾಗುವುದು. ಸಂಪತ್ತಿನಿಂದ ಪ್ರಾಪಂಚಿಕ ಸುಖ ಸಿಗುವುದು. <ref>संस्कृत सुभाषितानि - ०५ ಗೀತಾಪ್ರೆಸ್</ref>

==ನೋಡಿ==
*[[ಗಾದೆಗಳು]]


{{under construction}}

==ಉಲ್ಲೇಖ==
{{Reflist|2}}


[[ವರ್ಗ:ಸಾಹಿತ್ಯ]]
[[ವರ್ಗ:ಜಾನಪದ]]