Difference between revisions 758699 and 1065299 on knwiki

[[File:Sacred lotus Nelumbo nucifera.jpg|thumb|ಪವಿತ್ರ ಕಮಲ ಪುಷ್ಪ (Nelumbo nucifera)]]
==ಒಳ್ಳೆಯ ಮಾತು==
*ಚೆನ್ನಾಗಿ ಆಡಿದ ಮಾತಿಗೆ ಸಂಸ್ಕೃತದಲ್ಲಿ ‘ಸುಭಾಷಿತ’ ಎನ್ನುತ್ತಾರೆ (ಸು:ಚೆನ್ನಾಗಿ, ಭಾಷಿತ:ಹೇಳಿದ್ದು). ‘ಚೆನ್ನಾಗಿ’ ಎಂದರೆ ಕೇಳುವುದಕ್ಕೆ ಇಂಪಾಗಿಯೋ, ಸುಂದರವಾದ ಪದಗಳನ್ನು ಪೋಣಿಸಿರುವುದೋ ಅಥವಾ ಆಕರ್ಷಕವಾಗಿಯೋ ಆಡಿದ್ದು. ಮತ್ತು ಬದುಕನ್ನು ಸಾರವನ್ನು ಸುಂದರವಾಗಿ, ಅರ್ಥಪೂರ್ಣವಾಗಿ ನೋಡಿ ಹೇಳಿದ ವಿವೇಕದ ವಚನ.
*ಹೀಗಾಗಿಯೇ ಸಂಸ್ಕೃತದಲ್ಲಿ ‘ಸುಭಾಷಿತ’ ಎಂಬ ವಿಶಿಷ್ಟ ಸಾಹಿತ್ಯಪ್ರಕಾರವೇ ಅಪಾರವಾಗಿ ಬೆಳೆದಿದೆ. ಸುಭಾಷಿತಗಳ ಬಗ್ಗೆ ‘ಸುಭಾಷಿತರತ್ನಭಾಂಡಾಗಾರ’ದ ಮಾತೊಂದು ಹೀಗಿದೆ:
(contracted; show full)

==ಸುಭಾಷಿತದ ಶ್ರೇಷ್ಠತೆ==
*ಸುಭಾಷಿತಗಳ ಸಂಗ್ರಹದಿಂದ ನಮ್ಮ ಜೀವನದೃಷ್ಟಿ ವಿಶಾಲವಾಗುವುದು; ಜೀವನದ ಎಷ್ಟೋ ಸಂದರ್ಭಗಳ ಗುಣಾವಗುಣಗಳನ್ನು ಸ್ಪಷ್ಟವಾಗಿ ವಿಮರ್ಶಿಸಲು ನೆರವಾಗುತ್ತವೆ; ಅದನ್ನೇ ಸುಭಾಷಿತವೊಂದು ಹೀಗೆಂದಿದೆ:
::ಪೃಥಿವ್ಯಾಂ ತ್ರೀಣಿ ರತ್ನಾನಿ ಜಲಮನ್ನಂ ಸುಭಾಷಿತಂ/
::ಮೂಢೈಃ ಪಾಷಾಣಖಂಡೇಷು ರತ್ನಸಂಜ್ಞಾ ವಿಧೀಯತೇ//
*‘ಭೂಮಿಯಲ್ಲಿ ಶ್ರೇಷ್ಠವಸ್ತುಗಳೆಂದರೆ ಕೇವಲ ಮೂರು: ನೀರು, ಅನ್ನ ಮತ್ತು ಒಳ್ಳೆಯ ಮಾತು. ಆದರೆ ಮೂರ್ಖರು ಕಲ್ಲಿನ ಚೂರುಗಳನ್ನು ‘‘ರತ್ನ ’’ಎಂದು ಕರೆಯುತ್ತಿರುವುದು ವಿಷಾದಕರ.’<ref>
[{{Cite web |url=http://www.prajavani.net/news/article/2016/11/30/455453.html |title=ಸುಭಾಷಿತ ಬದುಕಿಗೆ ಒದಗುವ ಮಧುರ ಮಾತು;30 Nov, 2016] |access-date=2016-11-30 |archive-date=2016-11-30 |archive-url=https://web.archive.org/web/20161130154006/http://www.prajavani.net/news/article/2016/11/30/455453.html |url-status=dead }}</ref>

==ಧರ್ಮದ ಬಗೆಗೆ ಸುಭಾಷಿತ==
::ಸತ್ಯಂ ಬ್ರೂಯಾತ ಪ್ರಿಯಂ ಬ್ರೂಯಾತ್|
:::ನಬ್ರೂಯಾತ್ ಸತ್ಯಮಪ್ರಿಯಂ||
::ಪ್ರಿಯಂ ಚ ನಾSನೃತಂ ಬ್ರೂಯಾತ್|
:::ಏಷ ಧರ್ಮಃ ಸನಾತನಃ ||
*ಸತ್ಯವನ್ನು ನುಡಿಯಬೇಕು, ಪ್ರಿಯವಾದ ಸತ್ಯವನ್ನು ಹೇಳಬೇಕು. ಅಪ್ರಿಯವಾದ, ಎಂದರೆ ಪರರ ಮನಸ್ಸಿಗೆ ಅಥವಾ ಪರರಿಗೆ ಕೆಡುಕಾಗಬಹುದಾದ ನೋವುಂಟು ಮಾಡುವ ಸತ್ಯವನ್ನು ಹೇಳಬೇಡ. ಬೇರೆಯವರಿಗೆ ಅಥವಾ ಇತರರಿಗೆ ಸಂತೋಷವಾಗುವುದೆಂದು ಅಥವಾ ಅನುಕೂಲವಾಗುವುದೆಂದು ಸುಳ್ಳನ್ನು ನುಡಿಯಬೇಡ. ಇದೇ ಸನಾತನವಾದ ಶಾಶ್ವತವಾದ ಬಹುಕಾಲದಿಂದ ಒಪ್ಪಿತವಾದ ಧರ್ಮ. <ref>ಸನಾತನಧರ್ಮ ಗ್ರಂಥ-ಕಿರುಹೊತ್ತಿಗೆ ಲೇಖಕ:ಅನಾಮಿಕ </ref>
(contracted; show full)*[[ಗಾದೆಗಳು]]

==ಉಲ್ಲೇಖ==
{{Reflist|2}}


[[ವರ್ಗ:ಸಾಹಿತ್ಯ]]
[[ವರ್ಗ:ಜಾನಪದ]]