Difference between revisions 743060 and 1053624 on knwiki{{Infobox person | name = ಎಕ್ಕಾರು ರಾಮನಾಯಕ್, (೧೯೦೨-೧೯೮೧) | image = ಚಿತ್ರ:Ramanayak Udupi HOtel.jpg | image_size = | caption = ೧೯೪೨ ರಾಮಾನಾಯಕರು, ಉಡಿಪಿ ಶ್ರೀಕೃಷ್ಣ ಭವನ ಎಂಬ ಹೆಸರಿನಲ್ಲಿ ಒಂದು ಚಿಕ್ಕ 'ಖಾನಾವಳಿ'ಯನ್ನು ತೆರೆದರು. ಅದರ ಉದ್ಘಾಟನೆಯನ್ನು 'ಸಾನೆ ಗುರೂಜಿ'ಯವರ ಹಸ್ತದಿಂದ ನೆರೆವೇರಿಸಲಾಯಿತು. | birth_date = | birth_place = | residence = ಮುಂಬಯಿನಗರದ ಮಾಟುಂಗಾ ಜಿಲ್ಲೆಯಲ್ಲಿ ವಾಸವಾಗಿದ್ದರು. | nationality = ಭಾರತೀಯರು | religion = ಹಿಂದು, ಬ್ರಾಹ್ಮಣ. | occupation = ಜನರಿಗೆ ಊಟ ತಯಾರಿಸಿ ಅದನ್ನು ಸುವ್ಯವಸ್ಥಿತವಾಗಿ ಬಡಿಸುವುದು. ಊಟಡ ಡಬ್ಬಗಳನ್ನು ತುಂಬಿಸಿ ಆಸಕ್ತರಿಗೆ ಒದಗಿಸುವುದು. | political party = ತಮ್ಮ ೧೧ ನೆಯ ಚಿಕ್ಕ ಪ್ರಾಯದಲ್ಲೇ ತಮ್ಮ ಊರುಬಿಟ್ಟು, ಮುಂಬಯಿನಗರಕ್ಕೆ ವಲಸೆ ಬಂದು ತಾವು ತಿಳಿದುಕೊಂಡಿದ್ದ ಆಡುಗೆಯ-ಕಲೆಯಿಂದ 'ಸಾಂತಾ ಕ್ರೂಝ್' ನಲ್ಲಿದ್ದ 'ಸರಸ್ವತಿಕಾಲೋನಿ'ಯ ಆಸಕ್ತ ಯುವಕರಿಗೆ ಊಟದ ವ್ಯವಸ್ಥೆಮಾಡಿ ಹೆಸರುಗಳಿಸಿದರು. | alma_mater = ಅಡುಗೆ ವಿದ್ಯೆಯಲ್ಲಿ ನಿಪುಣರು. | spouse = ಸೀತಾಬಾಯಿ ರಾಮನಾಯಕ್, | children = ೧. ನಾಗೇಶ್ ರಾಮನಾಯಕ್, ಹೃದಯಾಘಾತದಿಂದ ನಿಧನರಾದರು. ೨. ಹರೀಶ್ ರಾಮನಾಯಕ್,ಕಾರ್ ಅಪಘಾತದಲ್ಲಿ ಪರಿವಾರದ ಸಮೇತ ನಿಧನರಾದರು.೩.ಸತೀಶ್ ರಾಮನಾಯಕ್, 'ಉಡುಪಿ ಕೃಷ್ಣ ಬೋರ್ಡಿಂಗ್ ಹೋಟೆಲೆನ ಮಾಲಿಕ'ರಾಗಿದ್ದಾರೆ.೪. ಸಾಯಿಪ್ರಕಾಶ್ ರಾಮನಾಯಕ್,ಮಾಟುಂಗ ಜಿಲ್ಲೆಯ ಮಹೇಶ್ವರಿ ಉದ್ಯಾನ್ ಬಳಿ ಇರುವ 'ಮೈಸೂರ್ ಉಪಹಾರಗೃಹ'ವನ್ನು ನಡೆಸಿಕೊಂಡುಹೋಗುತ್ತಿದ್ದಾರೆ. }} '''[[ಎಕ್ಕಾರು ರಾಮನಾಯಕ್]]''', (೧೯೦೨-೧೯೮೧) ಮುಂಬಯಿನಗರದ ಹೋಟೆಲ್ ವಲಯಕ್ಕೆ 'ಎ.ರಾಮಾನಾಯಕ್' <ref>[http://travel.cnn.com/mumbai/eat/simply-southilicious-186363/ CNN.Travel]</ref> ಎಂದು ಪ್ರಸಿದ್ಧರಾಗಿದ್ದಾರೆ. ಅವರೊಬ್ಬ ಸುಪ್ರಸಿದ್ಧ ಹೋಟೆಲ್ ಉದ್ಯಮಿ. ದಕ್ಷಿಣ ಭಾರತದಿಂದ ಮುಂಬಯಿಗೆ ಬರುವ ಯಾತ್ರಿಗಳಿಗೆ, ಊರಿನ ತರಹದ ಪೂರ್ಣಭೋಜನವನ್ನು ಒದಗಿಸುವಲ್ಲಿ 'ಉಡುಪಿ ಕ್ರಿಷ್ಣಭವನ್,'<ref>[http://www.geobeats.com/video/24b900/udipi-restaurant geobeats, Ramanayak's Udupi video, ಪ್ರೇಮ್ಜಿತ್ ಸಿಂಗ್ ನಿರ್ಮಿಸಿದ ಮಾಹಿತಿ ಪೂರ್ಣ ವೀಡಿಯೊ']</ref> ಪ್ರಮುಖವಾದದ್ದು. ಮುಂಬಯಿನಗರದ 'ಮಾಟುಂಗಾ ಜಿಲ್ಲೆಯಲ್ಲಿ ಇನ್ನೂ ಹಲವು ಇಂತಹ 'ಫುಲ್ ಮೀಲ್', 'ಪ್ಲೇಟ್ ಮೀಲ್' ಒದಗಿಸುವ ಕೆಲವು ಹೋಟೆಲ್ಲುಗಳಿವೆ : # [[ರಾಮಕೃಷ್ಣ ಲಂಚ್ ಹೋಂ]], # [[ಸರಸ್ವತಿ ರೆಸ್ಟೊರೆಂಟ್]], # [[ಮಹಾಭೋಜ್]], ಇತ್ಯಾದಿ. ದಕ್ಷಿಣ ಭಾರತದ ಜನಸಮುದಾಯಕ್ಕೆಲ್ಲಾ ಈ ಖಾನಾವಳಿ ಚಿರಪರಿಚಿತ. ಮಾಟುಂಗ (ಸೆಂ.ರೈಲ್ವೆ) ರೈಲ್ವೆಸ್ಟೇಷನ್ ಬದಿಯಲ್ಲೇ ಇದ್ದು, ವಿಶಾಲವಾಗಿರುವುದರಿಂದ ಪರಿವಾರದವರೆಲ್ಲಾ ಒಟ್ಟಿಗೆ ಭೋಜನಮಾಡಬಹುದು.<ref>[http://www.freepressjournal.in/food/8-oldest-udupi-restaurants-in-mumbai/662236 Sept 9th 22015, Free press journal, 8 oldest Udupi restaurants in Mumbai]</ref> '[[ಮೈಸೂರ್ ಮೆಸ್]],' ಎಂಬ ಇದೇತರಹದ ಪುರಾತನ ಭೋಜನಶಾಲೆ, ಕಾರಣಾಂತರಗಳಿಂದ ಮುಚ್ಚಲ್ಪಟ್ಟಿತು.<ref>http://wikimapia.org/3431188/Rama-Nayak-s</ref> [[ಚಿತ್ರ:My cafe.jpg|thumb|right|200px|'ಮುಂಬಯಿನ ಮಾಟುಂಗಾ ವಲಯದ ಮಹೇಶ್ವರಿ ಉದ್ಯಾನದ ಹತ್ತಿರವಿರುವ ಈಗಿನ ರಾಮಾನಾಯಕರ ಮೈಸೂರ್ ಕೆಫೆ']] ==ಮುಂಬಯಿನ ಪ್ರಥಮ ಉಡಿಪಿ-ಊಟದ ಹೋಟೆಲ್ == ರಾಮಾನಾಯಕ್, [http://shaaaks.wordpress.com/2009/10/11/a-rama-nayaks-udipi/ ಉಡಿಪಿ ಊಟದ ಮನೆ] {{Webarchive|url=https://web.archive.org/web/20100123071004/http://shaaaks.wordpress.com/2009/10/11/a-rama-nayaks-udipi/ |date=2010-01-23 }}</ref> ಖಾನಾವಳಿಗೆ ಬರುವ ಬಳಕೆದಾರರ ಆದ್ಯತೆಗಳಿಗೆ ಸ್ಪಂದಿಸಿ ಸಹಾಯಮಾಡುತ್ತಾರೆ. ರಾಮಾನಾಯಕರು, ತಮ್ಮ ೧೧ ನೆಯ ಚಿಕ್ಕ ಪ್ರಾಯದಲ್ಲೇ ತಮ್ಮ ಊರುಬಿಟ್ಟು, ಆಗಿನ ಮುಂಬಯಿ ಮಹಾಶಹರಿಗೆ ವಲಸೆ ಬಂದು ಸೇರಿಕೊಂಡರು. ತಮಗೆ ತಿಳಿದ ಆಡುಗೆಯ-ಕಲೆಯಿಂದ 'ಸಾಂತಾ ಕ್ರೂಝ್ ನಲ್ಲಿದ್ದ ಸರಸ್ವತಿಕಾಲೋನಿ'ಯಲ್ಲಿ ಊಟದ ವ್ಯವಸ್ಥೆಮಾಡಿ ಹೆಸರುಗಳಿಸಿದರು. ೧೯೪೨ ರಾಮಾನಾಯಕರು, ಒಂದು ಚಿಕ್ಕ 'ಖಾನಾವಳಿ'ಯನ್ನು ತೆರೆದರು. [[ಸಾನೆ ಗುರೂಜಿ]] ಯವರ ಹಸ್ತದಿಂದ ಪ್ರಾರಂಭೋತ್ಸವವನ್ನು ಮಾಡಿಸಿದ [[ಭೋಜನಮಂದಿರ]], ಇದುವರೆವಿಗೂ ನಿರಂತರವಾಗಿ ನಡೆದುಕೊಂಡು ಬಂದಿದೆ. ಅವರ ಮನಸ್ಸಿನಲ್ಲಿದ ೩ ಮುಖ್ಯ ಸಂಗತಿಗಳನ್ನು ಬಿಡದೆ, ತಮ್ಮ ಜೀವಿತದ ಕೊನೆಗಾಲದವರೆಗೂ ಕಾಪಾಡಿಕೊಂಡು ಬಂದರು.<ref>[{{Cite web |url=http://shaaaks.wordpress.com/2009/10/11/a-rama-nayaks-udipi/ |title=Oct,11,2009, 'A. Rama Nayak’s UDIPI'] |access-date=2010-04-11 |archive-date=2010-01-23 |archive-url=https://web.archive.org/web/20100123071004/http://shaaaks.wordpress.com/2009/10/11/a-rama-nayaks-udipi/ |url-status=dead }}</ref> ==ರಾಮಾನಾಯಕರ ಪರಿವಾರ== [[ಚಿತ್ರ:Rama nayak.jpg|thumb|left|250px|'ಮೂಲ ಉಡಿಪಿ ಶ್ರೀ ಕ್ರಿಷ್ಣ ಬೋರ್ಡಿಂಗ್,ಮುಂಬಯಿನ, 'ಮಾಟುಂಗಾ ರೈಲ್ವೆ ನಿಲ್ದಾಣ'ದ ಬಳಿ ಇದೆ']] ೪ ಜನ ಗಂಡುಮಕ್ಕಳಲ್ಲಿ, [[ನಾಗೇಶ್ ರಾಮಾನಾಯಕ್]](ಜ: ೧೯೪೭, ರ ಫೆಬ್ರವರಿ, ೭ ರಂದು) ಹಿರಿಯವರು. ಅವರು ಸನ್, ೨೦೦೯ ರ, ಜನವರಿ, ೭ ರಂದು, 'ಹೃದಯಾಘಾತ'ದಿಂದ ನಿಧನರಾದರು. ಎರಡನೆಯವರಾಗಿದ್ದ, [[ಡಾ. ಹರೀಶ್ ರಾಮನಾಯಕ್]] ರವರು, ಕಾರ್ ಅಪಘಾತದಲ್ಲಿ ತಮ್ಮ ಪರಿವಾರದವರ ಜೊತೆ ಮೃತರಾದರು. ಮೂರನೆಯ ಮಗ, [[ಸತೀಶ್ ರಾಮನಾಯಕ್]], [[ಉಡಿಪಿ ಕ್ರಿಷ್ಣ ಬೋರ್ಡಿಂಗ್ ಉಪಹಾರಗೃಹ]]ವನ್ನು ನೋಡಿಕೊಂಡು ಹೋಗುತ್ತಿದ್ದಾರೆ. ನಾಲ್ಕನೆಯವರಾದ, [[ಸಾಯಿಪ್ರಕಾಶ್]], [[ಮಹೇಶ್ವರಿ ಉದ್ಯಾನದ ಬಳಿಯಿರುವ ಉಪಹಾರಗೃಹದ ಮಾಲೀಕ]]ರಾಗಿದ್ದಾರೆ. [[ಚಿತ್ರ:RN ! 003.JPG|thumb|left|250px|'ಮಹಾಶ್ವರಿ ಉದ್ಯಾನದ ಬಳಿಯ ಶಾಖೆಯಲ್ಲಿ ಪಂಜಾಬಿ, ಗುಜರಾತಿ, ಮತ್ತಿತರ ತಿಂಡಿ-ಊಟಗಳು,ಹಾಗೂ ತಿಂಡಿಗಳ ಪಾರ್ಸೆಲ್ ಸೇವೆ ಲಭ್ಯವಿದೆ']] ==ಗ್ರಾಹಕರ ಆದ್ಯತೆ ಮೊದಲು== # ಊಟದ ಗುಣಮಟ್ಟದಲ್ಲಿ ಯಾವ ಕೊರತೆಯೂ ಆಗದಂತೆ ಪ್ರಯತ್ನಮಾಡುವುದು. # ಎಲ್ಲವರ್ಗದವರಿಗೂ ಎಟುಕುವಂತೆ ಊಟದ-ದರವನ್ನು ಕಾಪಾಡಿಕೊಂಡುಬರುವುದು. # ಊಟದಲ್ಲಿ ಸ್ವಾದಿಷ್ಟತೆ, ಮತ್ತು ಶುಚಿತ್ವವನ್ನು ಕಾಯ್ದುಕೊಂಡು ಬರುವುದು. ಈ ತತ್ವಗಳನ್ನು ಅವರ ಮಕ್ಕಳು ಪಾಲಿಸಿಕೊಂಡು ಬರುತ್ತಿದ್ದಾರೆ. ಶುಚಿ-ರುಚಿಯಲ್ಲಿ ಇದುವರೆವಿಗೂ ವ್ಯತ್ಯಾಸವಿಲ್ಲ. ಊಟದ ಸೇವೆ, ಅತ್ಯಂತ ತ್ವರಿತ. ಉಂಡತಟ್ಟೆಗಳನ್ನು ತೆಗೆದು, ಮತ್ತೆ ಟೇಬಲ್ ನ್ನು ಶುಚಿಗೊಳಿಸಿ, ಹೊಸತಾಟನ್ನು ತಂದಿರಿಸಲು ಆಗುವ ಸಮಯ ಬಹಳ ಕಡಿಮೆ. ಇದನ್ನು ನಿರ್ವಹಿಸಲು ಸಿಬ್ಬಂದಿವರ್ಗವನ್ನು ಚೆನ್ನಾಗಿ ತರಪೇತುಮಾಡಿದ್ದಾರೆ.<ref>[http://travel.cnn.com/mumbai/eat/simply-southilicious-186363 ದಕ್ಷಿಣ ಭಾರತೀಯ ಪದ್ಧತಿಯ ಊಟ]</ref> ==ಎರಡು ಬಗೆಯ ಊಟದವ್ಯವಸ್ಥೆ== # [[ಫುಲ್ ಮೀಲ್ ]]: ಬಾಳೆಯೆಲೆಯಮೇಲೆ ಬಡಿಸುವ ವ್ಯವಸ್ಥೆ ಇದೆ. ಎಲ್ಲಾ ವ್ಯಂಜನಗಳೂ ಕೇಳಿದಷ್ಟು ದೊರೆಯುತ್ತವೆ.<ref>[https://www.zomato.com/mumbai/a-rama-nayaks-udipi-shri-krishna-boarding-matunga-east A Ramanayak's Udipi Shri.krishna bhavan]</ref> # [[ಪ್ಲೇಟ್ ಮೀಲ್]] : [ಪ್ರತಿಊಟ-೧,೫೦೦ ಕ್ಯಾಲರಿ] ಫುಲ್ ಮೀಲ್ ನಲ್ಲಿ ಬಡಿಸುವ ಊಟವನ್ನೇ ಇಲ್ಲಿಯೂ ಬಡಿಸಲಾಗುವುದು. ಆದರೆ, ಪದಾರ್ಥಗಳು ಸೀಮಿತ.<ref>[https://www.zomato.com/mumbai/ramanayak-udipi-1-matunga-east Ramanayak's udipi]</ref> ==[[ಪ್ಲೇಟ್ ಮೀಲ್ಸ್]]== # ಎರಡು ಮುದ್ದೆ ಅನ್ನ, # ಮೂರು ಚಪಾತಿಗಳು ಅಥವಾ ಪೂರಿಗಳು. # ಒಂದು ಬಟ್ಟಲು ಸಾಂಬಾರ್. (ಬೇಕಾದರೆ ಕೇಳಿಪಡೆಯಬಹುದು.ಇದಕ್ಕೆ ಹಣಕೊಡಬೇಕಾಗಿಲ್ಲ) # ಒಂದು ಬಟ್ಟಲು ರಸಮ್ . (ಬೇಕಾದರೆ ಕೇಳಿಪಡೆಯಬಹುದು.ಇದಕ್ಕೆ ಹಣಕೊಡಬೇಕಾಗಿಲ್ಲ) # ಹಪ್ಪಳ, # ಉಪ್ಪಿನಕಾಯಿ ಹೋಳು-ರಸ, # ದಾಲ್,ಮತ್ತು ಉಪ್ಪು. ೪೦ ರ ದಶಕದಲ್ಲಿ, ಈಗಿರುವ ಹೋಟೆಲ್ ನ ಪಕ್ಕದ ಮಂಗಳೂರು ಹೆಂಚಿನ ಕಟ್ಟಡದಲ್ಲಿ, ಭೋಜನಗೃಹವನ್ನು ನಡೆಸುತ್ತಿದ್ದರು. ಈ ವ್ಯವಸ್ಥೆ ಸುಮಾರು ಎರಡು ದಶಕಗಳಿಗೂ ಮೇಲ್ಪಟ್ಟು ನಡೆಸಿಕೊಂಡುಬರಲಾಯಿತು.ಸ್ವತಂತ್ರ್ಯಪೂರ್ವದಲ್ಲಿ ರಾಮನಾಯಕ್ ತಮ್ಮ ಹೋಟೆಲ್ ನಲ್ಲಿ ತಿಂಗಳಿಗಾಗುವಷ್ಟು ಊಟದ ಕೂಪನ್ ತೆಗೆದುಕೊಂಡರೆ, ಒಂದು ಊಟಕ್ಕೆ ೨ ರೂಪಾಯಿಹಣವನ್ನು ತೆಗೆದುಕೊಳ್ಳುತ್ತಿದ್ದರು. ಪ್ರತಿ ತಿಂಗಳ ಕೊನೆಯ ಅದಿತ್ಯವಾರ ಮಿತಿಯಿಲ್ಲದ, ಹಬ್ಬದಊಟವನ್ನು ಮಾಡಿ ಪ್ಲೇಟ್ ಮೀಲ್ಸ್ ದರದಲ್ಲೇ ಬಡಿಸುತ್ತಿದ್ದರು."[[ತಿಂಗಳಿನ ೨೯ ದಿನದಲ್ಲಿ ನಿಮ್ಮ ಹಣ ಖರ್ಚುಮಾಡಿ ಊಟಮಾಡಿದ್ದೀರಿ. ಇಂದು ನಮ್ಮ ಸೇವೆಯನ್ನು ಸ್ವೀಕರಿಸಿ]] ", ಎಂದು ಆದರ ವಿಶ್ವಾಸಗಳಿಂದ ದೈನ್ಯತೆಯ, ಮುಗುಳ್ನಗೆಯಿಂದ ಜನರನ್ನು ಸತ್ಕರಿಸುತ್ತಿದ್ದ, ನೋಟ ಇಂದಿಗೂ ಅಲ್ಲಿ ಬರುವ ಹಳೆಯ ಬಳಕೆದಾರರ ಮುಖದಿಂದಲೇ ಕೇಳುವುದು ಬಹಳ ಸೊಗಸು.<ref>[http://timesofindia.indiatimes.com/city/mumbai/Mumbai-losing-its-taste-for-Udupi/articleshow/10023697.cms ಊಟಧ ಹೋಟೆಲ್]</ref> ಉಡಿಪಿ ಭೋಜನಗೃಹದಲ್ಲಿ ಎಲ್ಲವೂ ವ್ಯವಸ್ಥಿತ. ಶುಚಿ-ರುಚಿಯಾದ ಭಕ್ಷಭೋಜ್ಯಗಳನ್ನು ಅಲ್ಲೇ ತಯಾರಿಸಿ ಉಣಬಡಿಸುತ್ತಾರೆ, ಸ್ವಚ್ಛತೆಗೆ ಅತಿಮಹತ್ವಕೊಡುತ್ತಾರೆ. ಬಳಕೆದಾರರು, ಹೋಟೆಲ್ ನ ಅಡುಗೆಮನೆಯ ಸ್ವಚ್ಛತೆಯನ್ನು ನೋಡಬಹುದು. ಇದಕ್ಕೆ ವೇಳೆಯನ್ನು ನಿಗದಿಮಾಡಿದ್ದಾರೆ. ಬೆಳಿಗ್ಯೆ ೧೦-೩೦-೨.೦೦ ಘಂಟೆ. ಸಾಯಂಕಾಲ : ೭.೦೦-೯-೩೦ ರವರೆಗೆ. ===ಶಾಖೆಗಳಲ್ಲಿ ತಾಜಾವ್ಯಂಜನಗಳು ಲಭ್ಯ=== [[ಉಡುಪಿ ಶ್ರೀಕೃಷ್ಣ ಬೋರ್ಡಿಂಗ್]] ನ ಹತ್ತಿರದ ಶಾಖೆಗಳಾದ [[ಮಹೇಶ್ವರಿ ಉದ್ಯಾನ್ ಶಾಖೆ]], [[ರೈಲ್ವೆ ಷ್ಟೇಷನ್ ಶಾಖೆ]]ಗಳಲ್ಲಿ, ತಾಜಾ ವ್ಯಂಜನಗಳು ದೊರೆಯುತ್ತವೆ. ನಮಗೆ [[ತಾಜಾಫೇಡೆ]], [[ಬರ್ಫಿ]], [[ಫರ್ಸಾನ್]], [[ಜಲೇಬಿ]], [[ಮೈಸೂರ್ ಪಾಕ್]], [[ಕೋಡುಬಳೆ]], [[ಚಕ್ಕಲಿ]], [[ಮಿಕ್ಸ್ಚರ್]], [[ಲಾಡು ಉಂಡೆ]], [[ಬೇಳೆ-ಹೋಳಿಗೆ]], ಇತ್ಯಾದಿಗಳು ದೊರೆಯುತ್ತವೆ. ==ವಿಶೇಷ ಊಟಗಳು== ವರ್ಷದ ೫ ದಿನಗಳಲ್ಲಿ, ವಿಶೇಷ ಊಟದ ವ್ಯವಸ್ಥೆಯನ್ನು ಹಮ್ಮಿಕೊಳ್ಳಲಾಗಿದೆ.<ref>[{{Cite web |url=http://www.gogobot.com/a-ramanayak-udipi-shri-krishn-mumbai-bombay-restaurant |title=A. Ramanayak Udipi Shri Krishna Boarding] |access-date=2014-03-17 |archive-date=2020-09-26 |archive-url=https://web.archive.org/web/20200926184616/http://www.gogobot.com/a-ramanayak-udipi-shri-krishn-mumbai-bombay-restaurant |url-status=dead }}</ref> # [['ಗಣರಾಜ್ಯದಿನೋತ್ಸವದಂದು']]. # [[೩೦ ನೆಯ ಮಾರ್ಚ್ ನ ಮುಂದಿನ ರವಿವಾರ, 'ಸ್ಥಾಪಕರ-ದಿನಾಚರಣೆಯನಿಮಿತ್ತ']]. # [[ಮೇ,೧ ನೆಯ ತಾರೀಖು, 'ಮಹಾರಾಷ್ಟ್ರದಿನಾಚರಣೆಯ ನಿಮಿತ್ತ']]. # [['ಸ್ವಾತಂತ್ರ್ಯದಿನೋತ್ಸವದಂದು']]. # [['ಶ್ರೀ.ವಿಶ್ವಕರ್ಮ ಮಾನಿಕ್ ರಾವ್', 'ಡಿ.ಲೊಟ್ಲಿಕರ್ ರವರ ಸ್ಮರಣದಿನ'ದಂದು ೨೮ ರ ನವೆಂಬರ್]] ==ನಿಧನ== ಮುಂಬಯಿ ಮಹಾನಗರದಲ್ಲಿ ಉಡುಪಿ ಪದ್ಧತಿಯ ಊಟ,ತಿಂಡಿ, ಅತಿಥಿ ಸತ್ಕಾರಗಳ ಉತ್ತಮ ವ್ಯವಸ್ಥೆಗಳನ್ನು ಮಹಾರಾಷ್ಟ್ರದ ಜನತೆಗೆ ಪರಿಚಯಿಸಿ ಹೆಸರುವಾಸಿಯಾಗಿದ್ದ ರಾಮಾನಾಯಕರು, ೩೦,ಮಾರ್ಚ್,೧೯೮೧ ರಲ್ಲಿ ನಿಧನರಾದರು. ==ಉಲ್ಲೇಖಗಳು== <references /> [[ವರ್ಗ:ಮುಂಬಯಿ ಕನ್ನಡಿಗರು]] [[ವರ್ಗ:ಮುಂಬಯಿ ನಗರದ ಉಡುಪಿ ಹೋಟೆಲ್‌ಗಳು]] [[ವರ್ಗ:ಉಡುಪಿ ಹೋಟೆಲ್]] [[ವರ್ಗ:ಮುಂಬಯಿ ನಗರದ ಹೆಸರಾಂತ, ಉಡುಪಿ ಹೋಟೆಲ್ ಗಳು]] All content in the above text box is licensed under the Creative Commons Attribution-ShareAlike license Version 4 and was originally sourced from https://kn.wikipedia.org/w/index.php?diff=prev&oldid=1053624.
![]() ![]() This site is not affiliated with or endorsed in any way by the Wikimedia Foundation or any of its affiliates. In fact, we fucking despise them.
|