Difference between revisions 747358 and 747380 on knwiki

{{ಹಿಂದೂ ಧರ್ಮಗ್ರಂಥಗಳು}}

'''ಭವಿಷ್ಯ ಪುರಾಣ''' ಹದಿನೆಂಟು [[ಪುರಾಣ]]ಗಳಲ್ಲಿ ಒಂದು. ಇದು [[ಸಂಸ್ಕೃತ]]ದಲ್ಲಿ ಬರೆಯಲ್ಪಟ್ಟಿದೆ ಮತ್ತು [[ವೇದ]]ಗಳ ಸಂಕಲಕ [[ವ್ಯಾಸ]]ರು ಕಾರಣರಿರಬಹುದೆಂದು ಹೇಳಲಾಗುತ್ತದೆ. ಇದರಲ್ಲಿ ಹಲವಾರು ರಾಜ ಮಹಾರಾಜರುಗಳ ಕಥೆ, ಬ್ರಾಹ್ಮಣ ವ್ರತಾಚರಣೆಗಳು, ಸ್ತ್ರೀಯರ ಕರ್ತವ್ಯಗಳು, [[ಬ್ರಹ್ಮ]], [[ಸ್ಕಂದ]], [[ಗಣೇಶ]]ರ ಪೂಜಾ ವಿಧಾನಗಳು ಮುಂತಾದವುಗಳು ಅಡಕವಾಗಿವೆ.
(ಭವಿಷ್ಯ ಪುರಾಣದ ಪ್ರತಿಸರ್ಗದ ಪ್ರಥಮ ಖಂಡದಲ್ಲಿ. ಏಳು ಅಧ್ಯಾಯವನ್ನೊಳಗೊಂಡಿದೆ


   ಒಂದನೆಯ ಅಧ್ಯಾಯ -
ಕೃತಯುಗದ ಭೊಪರ ವೃತ್ತಾಂತ
   
  ಎರಡನೆಯ ಅಧ್ಯಾಯ -
ತ್ರೇತಾಯುಗದ ಭೊಪರ ವೃತ್ತಾಂತ

ಮೂರನೆ ಅಧ್ಯಾಯ -
ದ್ವಾಪರಯುಗದ ಭೊಪರ ವೃತ್ತಾಂತ 

ನಾಲ್ಕನೆಯ ಅಧ್ಯಾಯ -
 ಮ್ಲೇಚ್ಚಯಜ್ಙ ವೃತ್ತಾಂತ ವರ್ಣನೆ 
           ೧ .ಶೌನಕರು ಪ್ರಾರ್ಥಿಸಿ ಕೇಳಿಕೊಳ್ಳುತ್ತಾನೆ -ಅಯ್ಯಾ ವಿದ್ವಾಂಸನೂ ತ್ರಿಕಾಲಜ್ಙನೂ ಆದ ಮಹಾಮುನಿಯೇ! ಆ ಪ್ರದ್ಯೋತನು ಮ್ಲೇಚ್ಚಯಜ್ಙವನ್ನು ಹೇಗೆ ಮಾಡಿದನು ? ಅದಲ್ಲದೆಲ್ಲವನ್ನು ನನಗೆ ಹೇಳು.

೨-೪ ) ಸೂತಮನಿ ವರ್ಯನು ಹೇಳುತ್ತಾನೆ -ಒಂದು ಕಾಲದಲ್ಲಿ ಕ್ಷೇಮಕರಾಜನ ಪುತ್ರನಾದ ಪ್ರದ್ಯೋತನು ಸಭೆಯಲ್ಲಿ ಮಾತನಾಡುತ್ತಿರುವಾಗ ನಾರದ ಮುನಿಯು ಅವನಲ್ಲಿಗೆ ಬಂದನು .ಅವನನ್ನು ಕಂಡು ಸಂತೋಷಗೊಂಡ ಧರ್ಮಜ್ಞನಾದ ದೊರೆಯು ಅವನನ್ನು ಪೂಜಿಸಿದನು .ಬಳಿಕ ಸುಖದಿಂದ ಕುಳಿತುಕೊಂಡು ಮುನಿಯು ಪ್ರದ್ಯೋತ ರಾಜನನ್ನು ನೊಡಿ ,ನಿನ್ನ ತಂದೆಯು ಮ್ಲೇಚ್ಚರಿಂದ ಹತನಾಗಿ ಯಮಲೋಕವನ್ನೈದಿದನು .ನಿನು ಮ್ಲೇಚ್ಚಯಜ್ಞಮಾಡಿದರೆ ಅದರ ಮಹಿಮೆಯಿಂದ ಆತನಿಗೆ ಸ್ವರ್ಗಲೋಕ ಪ್ರಾಪ್ತಿಯಾಗುವುದು "ಎಂದು ಹೇಳಿದನು .

೫)ಅದನ್ನು ಕೇಳಿ ಕೋಪದಿಂದ ಕೆಂಪಾದ ಕಣ್ಣುಳ್ಳ ಪ್ರದ್ಯೋತನು ವೇದವಿದೋತ್ತಮರಾದ ಬ್ರಾಹ್ಮಣರನ್ನ ಕರೆಯಿಸಿ ಕುರುಕ್ಷೇತ್ರದಲ್ಲಿ ಮ್ಲೇಚ್ಚಯಜ್ಞವನ್ನಾರಂಭಿಸಿದನು .
೬) ಹದಿನಾರು ಯೋಜನದಳತೆಯುಳ್ಳದೂ ಚತುಷ್ಕೋಣಾಕೃತಿಯುಳ್ಳದೊ ಆದ ಯಜ್ಞಕುಂಡವನ್ನು ರಚಿಸಿ ದೇವತೆಗಳನ್ನು ಧ್ಯಾನಿಸಿ ದೊರೆಯು ಮ್ಲೇಚ್ಚರನ್ನ ಹೊಮಮಾಡಿದನು .
೭-೯)ಹಾರಣೊರನ್ನು ,ಬರ್ಬರನ್ನೊ,ಗುರುಂಎರನ್ನೂ,ಶಕರನ್ನೂ,ಖಸರನ್ನೂ ,ಯವನರನ್ನೂ ,ಪಲ್ಲವರನ್ನೂ ,ರೋಮಜರನ್ನೂ,ಕಾಮರೊಜರನ್ನೂ,ಚೀಣರನ್ನೂ ,ಖರರನ್ನೂ,ಸಾಗರಮಧ್ಯರಲ್ಲಿ ದ್ವೀಪಗಳಲ್ಲಿದ್ದವರನ್ನು ಬಿಡದೆ ವೇದ ಮಂತ್ರ ಪ್ರಭಾವದಿಂದ ಬರಮಾಡಿ ಸುಟ್ಟು ಬೂದಿಮಾಡಿದ್ದನು .ಬಳಿಕ ಬ್ರಾಹ್ಮಣರಿಗೆ ದಕ್ಷಿಣೆಯನ್ನು ಕೊಟ್ಟು ,ಅವಭೃಥಸ್ನಾನವನ್ನು ನೆರವೇರಿಸಿದನು .ಈ ಕಾರಣದಿಂದ ಕ್ಷೇಮಕರಾಜನಿಗೆ ಯಮಲೋಕವಾಸವು ಪರಿಹಾರವಾಗಿ ಸ್ವರ್ಗಲೋಕ ಪ್ರಾಪ್ತಿಯಾಯಿತು.

೧೦-೧೧) ಬಳಿಕ ಪ್ರದ್ಯೋತರಾಜನಿಗೆ ಮ್ಲೇಚ್ಚಹಂತೃವೆಂಬ ಹೆಸರು ಭೋಮಿಯಲ್ಲೆಲ್ಲ ಪ್ರಸಿದ್ಧವಾಯಿತು.ಆಮಹಾತ್ಮನು ಹತ್ತುಸಾವಿರ ವರ್ಷಗಳಕಾಲ ರಾಜ್ಯವನ್ನಾಳಿ ಬಳಿಕ ಸ್ವರ್ಗಸ್ಥನಾದನು .ಪ್ರದ್ಯೋತರಾಜನಿಗೆ  ವೇದವಂತನೆಂಬ ಮಗನಾದನು ಅವನು ಎರೆಡು ಸಾವಿರ ವರ್ಷಗಳ ಕಾಲ ದೊರೆತನವನ್ನು ಮಾಡಿದನು .ಆ ಕಾಲದಲ್ಲಿ ಕಲಿಯು ತಾನೇ ಮ್ಲೇಚ್ಚನಾಗಿ ನಾರಾಯಣನನ್ನು ಪೂಜಿಸಿ ಬಳಿಕ ದಿವ್ಯವಾದ ಸ್ತುತಿಯಿಂದ ಪ್ರಾರ್ಥಿಸಿದನು .

೧೨-೧೩) ಕಲಿಯು ಹೇಳತ್ತಾನೆ  .ಅನಂತನೂ, ಮಹಾತ್ಮನೂ ಯಾವಾಗಲೂ ಇರುವವನೂ ಚತುರ್ಯುಗಕಾರಿಯೂ,ಸರ್ವಸಕ್ಷಿಯೂ,ಕೃಷ್ಣನೂ ಆದ ನಿನಗೆ ನಮಸ್ಕಾರ.ದಶಾವತಾರಗಳನ್ನು ಮಾಡಿದ ಹರಿಯೇ! ನಿನಗೆ ಅನೇಕ ನಮಸ್ಕಾರ.

೧೪) ಶಕ್ತಿಯಿಂದ ಅವತರಿಸಿದ ರಾಮನೂ ,ಕೃಷ್ಣನೂ ಆದ ನಿನಗೆ ನಮಸ್ಕಾರ .ಮತ್ಸ್ಯರೂಪನಾದ ನಿನಗೆ ನಮಸ್ಕಾರ ,ಪೀತಾಂಬರಿಧಾರಿಯಾದ ಮಹಾತ್ಮನೆ ನಿನಗೆ ನಮಸ್ಕಾರ .

೧೫-೧೬) ಭಕ್ತರಿಗಾಗಿ ಅವತಾರ ಮಾಡುವವನೂ,ಕಲ್ಪಕ್ಷೇತ್ರದಲ್ಲಿ ವಾಸಮಾಡುವವನೂ ಆದ ನಿನಗೆ ನಮಸ್ಕಾರ .ಓ ಪ್ರಭುವೇ! ದೊರೆಯಾದ ವೇದವಂತನು ನನ್ನ ಸ್ಥಾನವನ್ನು ನಾಶಪಡಿಸಿ  ನನಗೆಡೆಯಿಲ್ಲದಂತೆ ಮಾಡಿದನು .ಅವನ ತಂದೆಯು ನನಗೆ ಪ್ರೀಯನಾದ ಮ್ಲೇಚ್ಚ ವಂಶವನ್ನು ನಾಶಮಾಡಿದನು .

೧೭)ಸೂತಮುನಿವರ್ಯರು ಹೆಳುತ್ತಾರೆ - ಮ್ಲೇಚ್ಚನ ಹೆಂಡತಿಯೊಡನೆ ಕಲಿಯು ಹಿಗೆ ತನ್ನನ್ನು ಸ್ತುತಿಸಲು ಭಕ್ತವತ್ಸಲನೂ,ಭಗವಂತನೂ ,ಆದ ಸಾಕ್ಷಾದ್ವಿಷ್ಣುವು ಅವನಿಗೆ ಪ್ರಕ್ಯಕ್ಷನಾದನು .ಅಲ್ಲದೆ  ಆ ಹರಿಯು " ನಾನು ನಿನಗಾಗಿ ಉತ್ತಮವಾದ ಕಲಿಯುಗವನ್ನು ಬಹುರೂಪವಾಗಿ ಏರ್ಪಡಿಸಿ ನಿನ್ನ ಇಷ್ಟವನ್ನು ಪೂರ್ತಿಮಾಡುವೆನು " ಎಂದು ಆ ಕಲಿಗೆ ಹೇಳಿದನು .

೧೮-೧೯) ಅಲ್ಲಿಯೇ ವಿಷ್ಣುಕರ್ದಮದಿಂದ ಮ್ಲೇಚ್ಚವಂಶಪ್ರವರ್ಧಕರಾದ ಆದಮನೆಂಬ ಪುರುಷನೂ,ಅವನಿಗೆ ಹೆಂಡತಿಯಾದ ಹವ್ಯವತಿಯೆಂಬ ಹೆಂಗಸೂ,ಹುಟ್ಟಿದರು .ವಿಷ್ಣುವು ಅಲ್ಲೆ ಮಾಯವಾದನು .ಆನಂದರಾಶಿಯಾದ ಕಲಿಯು ನೀಲಗಿರಿಗೆ ಹೋಗಿ ಅಲ್ಲಿ ಕೆಲವು ಕಾಲ ವಾಸಮಾಡಿದನು .

೨೦) ಇತ್ತ ವೇದವಂತರಾಜನಿಗೆ ಸುನಂದನೆಂಬ ಪುತ್ರನುದಿಸಿದನು ‌

ಐದನೆಯ ಅಧ್ಯಾಯ -
  ನ್ಯೊಹವಂಶ ವರ್ಣನೆ ,ಮ್ಲೇಚ್ಚಭಾಷೆಯ ಉತ್ಪತ್ತಿ ವಿಧಾನ 

ಆರನೆಯ ಅಧ್ಯಾಯ-
  ಮ್ಲೇಚ್ಚರು ಆರ್ಯವರ್ತಕ್ಕೆ ಬಾರದಿರಲು ಕಾರಣ ,ಕಾಶ್ಯಪ ಬ್ರಹ್ಮಣ ವೃತ್ತಾಂತ ವರ್ಣನೆ 

ಏಳನೆಯ ಅಧ್ಯಾಯ -
  ಪ್ರಮರ ವಂಶದಲ್ಲಿ ವಿಕ್ರಮಾದಿತ್ಯನ ಉತ್ಪತ್ತಿ

(ಪ್ರಥಮಖಂಡ ಸಮಾಪ‌್ತಿ)
[[ವರ್ಗ:ಪುರಾಣ]]
[[ವರ್ಗ:ಹಿಂದೂ ಧರ್ಮಗ್ರಂಥಗಳು]]