Difference between revisions 799317 and 1043912 on knwiki{{Use dmy dates|date=May 2012}} {{Use British English|date=May 2012}} {{Infobox scientist |name = ವಿಲಿಯಂ ಸ್ಟೇನ್ಲಿ ಜೇವನ್ಸ್ |image = Picture of jevons.jpg |image_size = |caption = |birth_date = {{Birth date|1835|9|1|df=y}} |birth_place = ಲವರ್ಪೂಲ್, ಲಂಕಾಷೈರ್,ಇಂಗ್ಲೆಂಡ್ |death_date = {{death date and age|1882|8|13|1835|9|1|df=y}} |death_place = Bexhill-on-Sea, Sussex, England |father = ಅನ್ನಿ ಜೇವನ್ಸ್ |citizenship = |nationality = ಬ್ರಿಟಿಷ್ |ethnicity = |field = ಅರ್ಥಶಾಸ್ತ್ರ, ತರ್ಕ |work_institutions = ವಿಶ್ವವಿದ್ಯಾಲಯ ಕಾಲೇಜು ಲಂಡನ್ 1876–80, ಓವೆನ್ಸ್ ಕಾಲೇಜು, ಮ್ಯಾಂಚೆಸ್ಟರ್ ವಿಶ್ವವಿದ್ಯಾಲಯ 1863–1875 |academic_advisors = Augustus De Morgan |doctoral_students = |known_for = ಪರಿಮಿತ ಪ್ರಯೋಜನ ಸಿದ್ಧಾಂತ |religion = |signature = Jevons's signature.jpg }} '''ವಿಲಿಯಂ ಸ್ಟೇನ್ಲಿ ಜೇವನ್ಸ್''' ಸೀಮಾಂತ ವಾದವನ್ನು ಸ್ವತಂತ್ರವಾಗಿ ನಿರೊಪಿಸಿದವರಲ್ಲಿ ಇಂಗ್ಲೆಂಡಿನ ಜೇವನ್ಸನು ಒಬ್ಬರಾಗಿದ್ದರು.ಇವನು ಕೇವಲ ೪೭ ವರ್ಷಗಳ ಅಲ್ಪ ಆಯುಷ್ಯ ಬಾಳಿದನಾದರೊ ಆರ್ಥಿಕ ಚಿಂತನೆಗೆ ಅವನ ಕೊಡುಗೆ ಅಪಾರವಾಗಿದೆ.ಅವನ ಚಿಂತನೆ ಕೇವಲ ಅರ್ಥಶಾಸ್ತ್ರಕ್ಕೆ ಮಾತ್ರ ಸೀಮಿತವಾಗಲಿಲ್ಲ ಇತರೆ ಶಾಸ್ತ್ರಗಳಾದ ಸಂಖ್ಯಾಶಾಸ್ತ್ರ, ತರ್ಕಶಾಸ್ತ್ರ ಮುಂತಾದ ಇನ್ನೂ ಅನೇಕ ಶಾಸ್ತ್ರಗಳಲ್ಲಿ ಕೂಡ ಇದೆ.ಇವರ ಬಹುಮುಖ ಪ್ರತಿಭೆ ಫಲ ಸ್ವರೂಪವಾಗಿ ವಿವಿಧ ಶಾಸ್ತ್ರಗಳಲ್ಲಿನ ವಿಶ್ಲೇಷಣೆಯ ವಿಧಾನಗಳನ್ನು ಅರ್ಥಶಾಸ್ತ್ರದಲ್ಲಿ ಅಲ್ಲಲ್ಲಿ ಬಳಸಿರುವುದು ಕಂಡುಬರುತ್ತದೆ. =='''ಜನನ'''== ವಿಲಿಯಂ ಸ್ಟೇನ್ಲಿ ಜೇವನ್ಸ್ ಸೆಪ್ಟೆಂಬರ್-೧-೧೮೩೫ರಂದು ''ಲಿವರ್ಪೂಲ್'''ನ,ಲಂಕಾಷೈರ್'ನ,[[ಇಂಗ್ಲೆಂಡ್]] ನಲ್ಲಿ ಹುಟ್ಟಿದರು.<ref>http://www.encyclopedia.com/topic/William_Stanley_Jevons.aspx</ref> ಅನ್ನಿ ಜೇವನ್ಸ್ =='''ಬಾಲ್ಯ ಮತ್ತು ಜೀವನ ಪರಿಚಯ'''== ೧೮೩೫ರಲ್ಲಿ ವರ್ತಕನೊಬ್ಬನ ಮಗನಾಗಿ ಹುಟ್ಟಿದ ಜೇಮ್ಸ್ ಲಂಡನ್ ವಿಶ್ವವಿದ್ಯಾಲಯದಲ್ಲಿ ಶಿಕ್ಷಣ ಪಡೆದರು.ಅವರು ಪ್ರಾರಂಭದಲ್ಲಿ ಶಿಕ್ಷಣ ಪಡೆದದ್ದು ಭೌತವಿಜ್ಞಾನ ಹಾಗೂ ರಸಾಯನಶಾಸ್ತ್ರಗಳಲ್ಲಿ.ವೈಯಕ್ತಿಕ ಆಸಕ್ತಿಯಿಂದ ಅವರು ಗ್ರೀಕ್,ಲ್ಯಾಟಂಗಳಂತಹ ಪುರಾತನ ಭಾಷೆಗಳನ್ನು ಅಭ್ಯಾಸ ಮಾಡಿದರು.ಏತನ್ಮಧ್ಯೆ ಅವರಿಗೆ ಆಸ್ಟ್ರೇಲಿಯದ ಗಣಿಯೊಂದರಲ್ಲಿ ಲೋಹಪರೀಕ್ಷಕನ ಕೆಲಸ ದೊರೆತಿದ್ದರಿಂದ ತನ್ನ ಶಿಕ್ಷಣವನ್ನು ಅರ್ಧಕ್ಕೆ ನಿಲ್ಲಿಸಬೇಕಾಯಿತು.ಆಸ್ಟ್ರೇಲಿಯಾದಲ್ಲಿ ಕೈತುಂಬ ಹಣ ಮಾಡಿಕೊಂಡು ಮರಳಿ ಇಂಗ್ಲೆಂಡಿಗೆ ಬಂದು ತನ್ನ ಶಿಕ್ಷಣವನ್ನು ಮುಂದುವರಿಸಿದರು.ತರ್ಕಶಾಸ್ತ್ರದಲ್ಲಿ ಬಿ.ಎ,ಹಾಗೂ ಅರ್ಥಶಾಸ್ತ್ರದಲ್ಲಿ ಎಂ.ಎ. ಪದವಿಗಳನ್ನು ಪಡೆದರು.ಇದರ ಫಲಸ್ವರೂಪವಾಗಿ ಅವರಿಗೆ ಮ್ಯಾಂಚಸ್ಟರಿನ ಮಹಾ ವಿದ್ಯಾಲಯವೊಂದರಲ್ಲಿ ರಾಜಕೀಯ ಅರ್ಥಶಾಸ್ತ್ರದ ಪ್ರಾಧ್ಯಾಪಕ ಕೆಲಸ ದೊರಕಿತು.ಇದರ ಜೊತೆಗೆ ಸಂಶೋಧನೆ ಮತ್ತು ಆಳವಾದ ವ್ಯಾಸಂಗಗಳು ಅವರ ಗುರಿ ಆಗಿದ್ದವು.ಈ ಕಾರ್ಯಗಳಿಗೆ ಅವರು ತನ್ನನ್ನು ಎಷ್ಟೊಂದು ಮುಡುಪಾಗಿಟ್ಟುಕೊಂಡನೆಂದರೆ ಅವರ ಆರೋಗ್ಯ ಕಡೆಗಟ್ಟಿತ್ತು.ಅವರ ಚಾಣಾಕ್ಷ ಬುದ್ಧಿ ಹಾಗೂ ಪರಿಶ್ರಮಗಳನ್ನು ಗುರುತಿಸಿ ೧೮೭೬ರಲ್ಲಿ ಲಂಡನ್ ವಿಶ್ವವಿದ್ಯಾಲಯ ಅವರಿಗೆ ಪ್ರಾಧ್ಯಾಪಕ ಹುದ್ದೆಯನ್ನು ಕೊಟ್ಟಿತು.ನಾಲ್ಕು ವರ್ಷಗಳ ಕಾಲ ಈ ಕೆಲಸ ಮಾಡಿದ ನಂತರ ಅನಾರೋಗ್ಯ ನಿಮಿತ್ತವಾಗಿ ಅವರು ರಾಜೀನಾಮೆ ಮಾಡಿದರು.ಮುಂದಿನ ಎರಡು ವರ್ಷಗಳಲ್ಲಿ ಅವನ ಆರೋಗ್ಯ ತುಂಬಾ ಹದಗೆಟ್ಟಿತು.೧೮೮೨ರಲ್ಲಿ ಅವನು ನೀರಿನಲ್ಲಿ ಮುಳುಗಿ ಆತ್ಮಹತ್ಯೆ ಮಾಡಿಕೊಂಡನು.ಜೇವನ್ಸನ ಲೇಖನಿಯಿಂ ಅನೇಕ ಕೃತಿಗಳು ಹೊರಬಂದವು.ಅವುಗಳಲ್ಲಿ ಮುಖ್ಯವಾದವುಗಳೆಂದರೆ: ಎ ಸೀರಿಯಸ್ ಫಾಲ್ ಇನ್ ದಾ ವ್ಯಾಲ್ಯು ಅಫ್ ಗೊಲ್ಡ್ ಮುಂತಾದವು. =='''ಜೇವನ್ಸ್ ನ ಅರ್ಥಿಕ ವಿಚಾರಗಳು'''== [[ಅರ್ಥಶಾಸ್ತ್ರ]]ಕ್ಕೆ ವೈಜ್ಞಾನಿಕ ಸ್ವರೂಪವನ್ನು ಕೊಟ್ಟವರಲ್ಲಿ ಜೇವನ್ಸ್ ನವರು ಅಗ್ರ ಗಣ್ಯರಲ್ಲಿ ಒಬ್ಬರು<ref>http://www-groups.dcs.st-and.ac.uk/history/Biographies/Jevons.html</ref>.ಆರ್ಥಿಕ ವಿಶ್ಲೇಷಣೆಗಾಗಿ ಗಣಿತವನ್ನು ವ್ಯಾಪಕವಾಗಿ ಬಳಸಿಕೊಂಡಿರುವುದು ವಿಶೇಷವಾಗಿದೆ.ಅವರು ಸಾಂಪ್ರದಾಯವಾದಿಗಳ ವಸ್ತುನಿಷ್ಠ ವಿಶ್ಲೇಷಣೆಯನ್ನು ತಳ್ಳಿಹಾಕಿ ವ್ಯಕ್ತಿಯನ್ನು ಆರ್ಥಿಕ ವಿಶ್ಲೇಷಣೆಯ ಕೇಂದ್ರಬಿಂದುವಾಗಿ ಪ್ರಸ್ತಾಪಿಸಿದ್ದಾನೆ.ಅವರ ಅರ್ಥಿಕ ವಿಚಾರಗಳು ಇಂತಿವೆ. =='''ಜೇವನ್ಸ್ ನಂಬರ್'''== ಜೇವನ್ಸ್ ತಮ್ಮ ವಿಜ್ಞಾನ ತತ್ವಗಳ ಬರವಣಿಗೆಯಲ್ಲಿ ಓದುಗರಿಗೆ ಪ್ರಶ್ನೆ ಕೇಳಿದಾರೆ ಏನೆಂದರೆ ಯಾವ ಎರಡು ಸಂಖ್ಯೆಯನ್ನು ಗುಣಕಾರ ಮಾಡಿದರೆ 8616460779 ಬರುವುದು?.ಇದು ''ಜೇವನ್ಸ್ ನಂಬರ್'' ಎಂದು ಪ್ರಸಿದ್ಧಿಯನ್ನು ಪಡೆಯಿತು. ಇದನ್ನು ಮುಂದಿನ ದಿನಗಳಲ್ಲಿ ಗಣಿತಜ್ಞರಾದ ಡೆರೀಕ್ ನೊರ್ಮಾನ್ ೧೯೦೩ರಲ್ಲಿ ನಂತರ ಮುಂದಿನ ದಿನಗಳಲ್ಲಿ ಸೋಲೋಮಾನ್ ಅಳವಡಿಸಿಕೊಂಡರು. =='''ಮೌಲ್ಯ ಸಿದ್ಧಾಂತ'''== ಜೇವನ್ಸ್ ಮೌಲ್ಯ ಸಿದ್ಧಾಂತಕ್ಕೆ ಬುನಾದಿಯಾಗಿ ತುಷ್ಟಿಗುಣವನ್ನು ಅಭ್ಯಾಸಿಸುತ್ತಾನೆ.ಜೇವನ್ಸ್ ನಿಗೆ ಮುನ್ನ ಕೆಲವು ಚಿಂತಕರು ತುಷ್ಟಿಗುಣ ತತ್ವದ ಬಗ್ಗೆ ತುಣುಕು ವಿಚಾರಗಳನ್ನು ಹೇಳಿದ್ದರು.ಜೇವನ್ಸ್ ಅವೆಲ್ಲವುಗಳನ್ನು ಕಲೆ ಹಾಕಿ ಅವುಗಳಲ್ಲಿ ಏಕರೂಪತೆ ತಂದು ತನ್ನದೇ ಆದ ವಿಚಾರಗಳಿಂದ ತರ್ಕಬದ್ಢವಾಗಿ ಹೆಣೆಯುತ್ತಾನೆ.ಆದರೆ ಮೌಲ್ಯ ಸಿದ್ಢಾಂತದ ಬಗ್ಗೆ ತನ್ನ ವಿಚಾರಗಳನ್ನು ಪ್ರತಿಪಾದಿಸುವುದಕ್ಕೆ.ಮೊದಲು ಅವನು ಸಂಪ್ರದಾಯವಾದಿಗಳು ಪ್ರತಿಪಾದಿಸಿದ ಶ್ರಮ ಮೌಲ್ಯ ಸಿದ್ಢಾಂತವನ್ನು ನಿರಾಕರಿಸುತ್ತಾನೆ.ಅವನ ಪ್ರಕಾರ ವಸ್ತುವಿನ ಮೌಲ್ಯವು ಅದನ್ನು ಉತ್ಪಾದಿಸಲು ತಗಲುವ ಶ್ರಮವನ್ನು ಆಧರಿಸಿ ನಿರ್ಧಾರವಾಗುವುದಿಲ್ಲ.ಅವನ ಪ್ರಕಾರ ಶ್ರಮವು ಮೌಲ್ಯದ ಮೂಲವಾಗಲಿ ಆಗಲಾರದುಆಗಲಾರದು.ವಸ್ತುವಿನ ಉತ್ವಾದನೆಗೆ ಶ್ರಮ ಬೇಕೆಂಬುದು ನಿಜ.ಆದರೆ ವಸ್ತುವನ್ನು ಉತ್ಪಾದಿಸಿದ ಅನಂತರ ಶ್ರಮವು ನಶಿಸಿ ಹೋಗುತ್ತದೆ.ಆದುದರಿಂದ ಮಾರುಕಟ್ಟೆಯಲ್ಲಿ ಆ ವಸ್ತುವು ಯಾವ ಬೆಲೆಗೆ ಮಾರಲ್ಪಡುತ್ತದೆ ಅಥವಾ ಕೊಳ್ಳಲ್ಪಡುತ್ತದೆ ಎಂಬುದನ್ನು ಅಳಿದುಹೋದ ಶ್ರಮ ಹೇಗೆ ತಾನೆ ಪ್ರಭಾವಿಸುವುದು ಸಾಧ್ಯ ಎಂದು ಜೇಮ್ಸ್ ಕೇಳತ್ತಾನೆ.ಈ ವಿಚಾರವನ್ನು ಮಂಡಿಸುವಾಗ ತಾನು ಈ ಕ್ಷೇತ್ರದಲ್ಲಿ ಒಂದು ದೊಡ್ಡ ಕ್ರಾಂತಿಯನ್ನೇ ಮಾಡುತ್ತಿದ್ದೇನೆಂದು ಜೇವನ್ಸ್ ಭಾವಿಸಿದ್ದ. =='''ಗೇಣಿ ಮತ್ತು ಲಾಭ'''== ಡೇವಿಡ್ ರಿಕಾರ್ಡೊನಂತೆ ಜೇವನ್ಸನು ಕೂಡ ಗೇಣಿಯು ಭೂಮಿಯ ಫಲವತ್ತತೆಯ ವ್ಯತ್ಯಾಸಗಳಿಂದ ಹಾಗೂ ಇಳಿಮುಖ ಪ್ರತಿಫಲದ ಕ್ರಿಯೆಯಿಂದ ಉದ್ಭವಿಸುವುದು ಎಂದು ಹೇಳುತ್ತಾನೆ.ಲಾಭದ ವಿಷಯದಲ್ಲಿ ಜೇವನ್ಸನು ಹೊಸತು ಎನ್ನ ಬಹುದಾದ ವಿಚಾರವನ್ನು ವ್ಯಕ್ತಪಡಿಸಿರುವನು.ಅವನು ಲಾಭವನ್ನು ಮೂರು ಭಾಗಗಳಾಗಿ ವಿಂಗಡಿನುತ್ತಾನೆ:೧ ಮೇಲ್ವಿಚಾರಕನೆ ವೇತನ, ೩: ಗಂಡಾಂತರದ ವಿಮೆ, ೩:ಬಡ್ಡಿ ಲಾಭವು ಈ ಮೂರು ಅಂಶಗಳನ್ನು ಒಳಗೊಂಡಿರುತ್ತದೆ ಎಂಬುದು ಜೇವನ್ಸನ ಅಭಿಮತ.ದೀರ್ಘಾವಧಿಯಲ್ಲಿ ಸ್ಪರ್ಧೆಯಿಂದ ಎಲ್ಲ ಕ್ಷೇತ್ರಗಳಲ್ಲಿ ಲಾಭದ ದರಗಳು ಸಮಾನವಾಗುವುವು ಎಂದು ಕೂಡ ಜೇವನ್ಸ್ ಹೇಳುತ್ತಾರೆ. =='''ಬಡ್ಡಿ ಮತ್ತು ಬಂಡವಾಳ'''== ಜೇವನ್ಸನ ಬಡ್ಡಿ ಹಾಗೂ ಬಂಡವಾಳ ಸಿದ್ಧಾಂತಗಳಲ್ಲಿ ಆಧುನಿಕತೆಯ ಧ್ವನಿ ಕೇಳಿಬರುತ್ತದೆ. ಅವರ ಪ್ರಕಾರ ಬಂಡವಾಳವು ಉತ್ಪಾದನಾ ಕ್ರಿಯೆಗೆ ತಗಲುವ ಅವಧಿಯನ್ನು ಕಡಮೆ ಮಾಡುತ್ತದೆ. ಬಂಡವಾಳವು ಕಾರ್ಮಿಕರ ಉತ್ಪಾದಕತೆಯನ್ನು ಬಲಪಡಿಸಿ ಹೆಚ್ಚು ಉತ್ಪನ್ನವನ್ನು ಹೊರತರುತ್ತದೆ.ಆದರೆ ಬಂಡವಾಳವು ಸ್ವತಃ ಒಂದು ಮಾನವ ನಿರ್ಮಿತ ಉತ್ಪಾದನಾ ಅಂಗವಾಗಿರುವುದರಿಂದ ಅದರ ಉತ್ಪಾದನೆಗೆ ವೇಳೆ ಸಾಧಾನ ಸಾಮಗ್ರಿಗಳು ಬೇಕು.ಬಂಡವಾಳವನ್ನು ಉಪಯೋಗಿಸಿ ಉತ್ಪಾದನೆ ಮಾಡುವುದರಿಂದ ಏಕ ಕಾಲಕ್ಕೆ ಎರಡು ಕೆಲಸಗಳಾಗುತ್ತವೆ.ಅದರ ಉಪಯೋಗದಿಂದ ಉತ್ಪಾದನೆ ಹೆಚ್ಚುವುದು.ಆದರೆ ಉತ್ಪಾದನೆ ಸುತ್ತು ಬಳಸಿನದಾಗಿರುವುದರಿಂದ ಹೆಚ್ಚು ಸಮಯ ತಗಲುವುದು.ಆದುದರಿಂದ ಬಂಡವಾಳವನ್ನು ಪೂರೈಸುವವರಿಗೆ ಬಡ್ಡಿ ಪಾವತಿ ಮಾಡಬೇಕಾಗುತ್ತದೆ.ಜೇವನ್ಸನ ಪ್ರಕಾರ ಉತ್ಪಾದನೆಯ ಹೆಚ್ಚಳ ದರವನ್ನು ಒಟ್ಟು ಉತ್ಪಾದನಯಿಂದ ಭಾಗಸಿದರೆ ಬಡ್ಡಿಯ ದರ ಬರುತ್ತದೆ.ಈ ಪ್ರಕಾರ ಜೇವನ್ಸ್ ಅನುಭೋಗ ವರ್ಜನೆಯ ಬಡ್ಡಿ ಸಿದ್ಧಾಂತವನ್ನು ಮಂಡಿಸುತ್ತಾನೆಯೆ ಹೊರತು ಅದನ್ನು ಸರಿಯಾಗಿ ಅಭಿವೃದ್ಧಿ ಪಡಿಸುವುದಿಲ್ಲ. =='''ಪರಾಮರ್ಶೆ'''== ಜೇವನ್ಸ್ ಅಲ್ಪಕಾಲ ಬಾಳಿಯಾದರೂ ಆರ್ಥಿಕ ಚಿಂತನೆಗೆ ಕೆಲವು ಮಹತ್ತರವಾದ ಕೊಡುಗೆಗಳನ್ನು ನೀಡಿದ್ದಾರೆ. ಆರ್ಥಿಕ ವಿಶ್ಲೇಷಣೆಗೆ ಒಂದು ಹೊಸ ಮಾರ್ಗವನ್ನು ಹಾಕಿ ಕೊಟ್ಟವರಲ್ಲಿ ಇವರು ಒಬ್ಬರು. ಅವರ ಮೌಲ್ಯ ಸಿದ್ಧಾಂತದ ವಿಚಾರಗಳಂತೂ ತುಂಬಾ ಆಳವಾಗಿವೆ.ಆದರೆ ಅವರು ಮಾಡಿದ ತಪ್ಪೇನೆಂದರೆ ತನ್ನ ಮೌಲ್ಯ ಸಿದ್ಧಾಂತವನ್ನು ವಿನಾಕಾರಣ ಬೆಳೆಸಿದ್ದಾರೆ.ಅದನ್ನು ಇನ್ನೂ ಸಂಕ್ಷಿಪ್ತವಾಗಿ ಹೇಳಬಹುದಾಗಿತ್ತು.ಗಣಿತದ ಬಳಕೆಯನ್ನೂ ಕಡಿಮೆ ಮಾಡಬಹುದಾಗಿತ್ತು.ಒಟ್ಟಿನಲ್ಲಿ ಅವರ ಎಲ್ಲ ಸಿದ್ಧಾಂತಗಳೂ ಕ್ಲಾಸಿಕಲ್ ಸಿದ್ಧಾಂತಗಳ ಜಾಡನ್ನೇ ಹಿಡಿದಿವೆ ಎಂದರೆ ತಪ್ಪಾಗಲಾರದು. ==ಉಲ್ಲೇಖಗಳು== {{reflist}} All content in the above text box is licensed under the Creative Commons Attribution-ShareAlike license Version 4 and was originally sourced from https://kn.wikipedia.org/w/index.php?diff=prev&oldid=1043912.
![]() ![]() This site is not affiliated with or endorsed in any way by the Wikimedia Foundation or any of its affiliates. In fact, we fucking despise them.
|