Difference between revisions 799867 and 803809 on knwiki{{Infobox ಭಾರತದ ಭೂಪಟ | native_name = ಮುಂಬಯಿ | other_name = ಮುಂಬಯಿ | type = metropolitan city | type_2 = capital | skyline= Gateway.jpg | skyline_caption= ಗೇಟ್‍ವೇ ಅಫ್ ಇ೦ಡಿಯಾ | locator_position = left (contracted; show full) ಹಾರ್ನ್^ಬೀ ವೆಲ್ಲಾರ್ಡ್ (Hornby Vellard)ಎಂಬ ಯೋಜನೆಯಲ್ಲಿ ೧೮೧೭ರಿಂದ ೧೮೪೫ರ ವರೆಗೂ ಮುಂಬಯಿಯ ಏಳು ದ್ವೀಪಗಳನ್ನು ಜೋಡಿಸುವ ಕಾರ್ಯವನ್ನು ಕೈಗೆತ್ತಿಕೊಳ್ಳಲಾಯಿತು. ಇದರ ಪರಿಣಾಮವಾಗಿ ಮುಂಬಯಿಯ ವಿಸ್ತೀರ್ಣ ೪೩೮ ಚದರ ಕಿ.ಮೀ ಗಳಿಗೇರಿತು. [[ಏ ಶಿಷ್ಯಾ|ಏಶಿಯಾದಲ್ಲಿಯೇ]] ಮೊಟ್ಟಮೊದಲ ರೈಲು ಮಾರ್ಗವನ್ನು ಮುಂಬಯಿಯಲ್ಲಿ ೧೮೫೩ರಲ್ಲಿ ನಿರ್ಮಿಸಲಾಯಿತು. [[ಅಮೆೇರಿಕಾ ಸಂಯುಕ್ತ ಸಂಸ್ಥಾನ|ಅಮೆರಿಕಾದಲ್ಲಿ]] ಅಂತರ್ಯುದ್ಧ (Civil War)ದ ಕಾಲದಲ್ಲಿ , ಜಗತ್ತಿನ ಪ್ರಮುಖ ಅರಳೆಪೇಟೆಗಳಲ್ಲಿ ಒಂದು ಎಂಬ ಹೆಸರು ಪಡೆದುಕೊಂಡ ಮುಂಬಯಿ, ಭರದಿಂದ ಬೆಳೆಯತೊಡಗಿತು. ಸುಯೆಝ್ ಕಾಲುವೆಯ ನಿರ್ಮಾಣವಾದ ಮೇಲೆ ಮುಂಬಯಿ ಅರಬ್ಬೀ ಸಮುದ್ರದ ಪ್ರಮುಖ ಬಂದರಾಯಿತು. (contracted; show full) == ಅರ್ಥ ವ್ಯವಸ್ಥೆ == ಮುಂಬಯಿಯನ್ನು ಭಾರತದ ಆರ್ಥಿಕ ರಾಜಧಾನಿ ಎನ್ನಲಾಗುತ್ತದೆ. ಭಾರತದ ೧೦% ಔದ್ಯೋಗಿಕ ಕಾರ್ಮಿಕರು ಮುಂಬಯಿಯಲ್ಲಿದ್ದಾರೆ. [[ಭಾರತ|ಭಾರತದ]] ಆದಾಯ ತೆರಿಗೆಯ ೪೦%, ಕೇಂದ್ರ ಅಬಕಾರಿಯ (Central excise) ೨೦%, ಕಸ್ಟಮ್ಸ್ ಸುಂಕದ ೬೦% , ರಫ್ತು ವ್ಯಾಪಾರದ ೪೦% , ಅಷ್ಟೇ ಅಲ್ಲ ೪೦ ಬಿಲಿಯನ್ ರೂಪಾಯಿಯ ವ್ಯಾವಸಾಯಿಕ ತೆರಿಗೆ (Professional Tax) ಮುಂಬಯಿಯಿಂದ ಬರುತ್ತದೆ. ಭಾರತದ ಪ್ರಮುಖ ಆರ್ಥಿಕ ಸಂಸ್ಥೆಗಳು ಮುಂಬಯಿಯಲ್ಲಿದ್ದು, [[ಮುಂಬ ೈ ಷೇರುಪೇಟೆ|ಮುಂಬಯಿ ಶೇರು ಬಜಾರು]], [[ಭಾರತೀಯ ರಿಸರ್ವ್ ಬ್ಯಾಂಕ್]] , [[ನ್ಯಾಷನಲ್ ಸ್ಟಾಕ್ ಎಕ್ಸ್ ಚೇಂಜ್]] ಇವೇ ಅಲ್ಲದೇ [[ಟಾಟಾ]], [[ಗೋದ್ರೇಜ್]] ಮತ್ತು [[ರಿಲಯನ್ಸ್]] ನಂಥಹಾ ಮಹಾ ಉದ್ಯೋಗಸಮೂಹಗಳ ಮುಖ್ಯ ಕಛೇರಿಗಳು ಮುಂಬಯಿಯಲ್ಲಿವೆ. ಅನೇಕ ವಿದೇಶೀ ಬ್ಯಾಂಕುಗಳೂ ತಮ್ಮ ಶಾಖೆಗಳನ್ನು ಮುಂಬಯಿಯಲ್ಲಿ ತೆರೆದಿವೆ. (contracted; show full) ಮುಂಬಯಿಯ ಜನಸಂಖ್ಯೆ ಒಂದು ಕೋಟಿ ಮೂವತ್ತು ಲಕ್ಷವಿದ್ದು ಪ್ರತಿ ಚದರ ಕಿ.ಮೀಗೆ ೨೯೦೦೦ ಜನರ ಸಾಂದ್ರತೆಯಿದೆ. ಪ್ರತಿ ಸಾವಿರ ಪುರುಷರಿಗೆ ೮೧೧ ಸ್ತ್ರೀ ಜನಸಂಖ್ಯೆಯಿದೆ. ಉದ್ಯೋಗವನ್ನರಸಿಕೊಂಡು ಪರಸ್ಥಳಗಳಿಂದ ಬರುವವರಲ್ಲಿ ಪುರುಷರೇ ಹೆಚ್ಚಿನ ಪ್ರಮಾಣದಲ್ಲಿರುವುದೇ ಇದಕ್ಕೆ ಕಾರಣ. ೮೩% ಜನ ಸಾಕ್ಷರರಾಗಿದ್ದಾರೆ. ಇಲ್ಲಿಯ ಜನಸಂಖ್ಯೆಯಲ್ಲಿ ೬೮% ಹಿಂದೂಗಳೂ, ೧೭% ಮುಸಲ್ಮಾನರೂ, ತಲಾ ೪% ಕ್ರಿಶ್ಚಿಯನ್ನ್ ಹಾಗೂ ಬೌದ್ಧರೂ ಇದ್ದಾರೆ. ಇನ್ನಿತರ ಧಾರ್ಮಿಕರೆಂದರೆ, ಪಾರ್ಸಿಗಳು, ಜೈನರು , ಯಹೂದ್ಯರು, ಮತ್ತು ಸೀಖರು. [[ಮಹಾರಾಷ್ಟ್ರ|ಮಹಾರಾಷ್ಟ್ರದ]] ನಾಡಭಾಷೆ [[ಮರಾಠಿ]] ಮುಂಬಯಿಯ ಮುಖ್ಯಭಾಷೆಯಾಗಿದ್ದರೂ, [[ಹಿಂದಿ]], [[ಗುಜರಾತಿ ]], [[ ಭಾಷೆ|ಗುಜರಾತಿ]], [[ಆಂಗ್ಲ|ಇಂಗ್ಲೀಷ್]], [[ಕೊಂಕಣಿ]] ಈ ಭಾಷಿಕರೂ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಭಾರತದ ಬಹುತೇಕ ಎಲ್ಲಾ ಭಾಷೆಗಳ ಜನರೂ ಮುಂಬಯಿಯಲ್ಲಿ ಕಾಣಸಿಗುತ್ತಾರೆ. ಮುಂಬಯಿಯ ಜನಸಂಖ್ಯೆಗೆ ಹೋಲಿಸಿದರೆ, ಅಪರಾಧಗಳ ಸಂಖ್ಯೆ ತಕ್ಕಮಟ್ಟಿಗಿದೆ. ಇಲ್ಲಿಯ ಮುಖ್ಯ ಸೆರೆಮನೆ ಅರ್ಥರ್ ರೋಡ್ ಜೈಲು. ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿಯ ನಗರಗಳಂತೆ, ಮುಂಬಯಿಯಲ್ಲಿ ಕೂಡಾ ಅತಿನಗರೀಕರಣದ ಪರಿಣಾಮವಾದ ಎಲ್ಲೆಲ್ಲಿಯೂ ಕಂಡುಬರುವ ಬಡತನ, ನೈರ್ಮಲ್ಯದ ಕೊರತೆ, ನಿರುದ್ಯೋಗ, ಮೂಲಭೂತ ಸೌಲಭ್ಯಗಳ ಅಭಾವ, ಕೊಳೆಗೇರಿಗಳ ಅನಿರ್ಬಂಧಿತ ಹೆಚ್ಚಳ ಇತ್ಯಾದಿಗಳು ಕಂಡುಬರುತ್ತವೆ. ಮುಂಬಯಿಯ ಮೂರು ಕಡೆ ನೀರಿದ್ದು ನಗರದ ಬೆಳವಣಿಗೆ ಗೆ ಜಾಗ ಕೇವಲ ಒಂದೇ ದಿಕ್ಕಿನಲ್ಲಿ ಸಾಧ್ಯವಾದ ಕಾರಣ, ನಿವೇಶನದ ಬೆಲೆ ಗಗನಕ್ಕೇರಿದ್ದು, ಸಾಮಾನ್ಯ ನಾಗರೀಕರು ನಗರದ ಹೊರವಲಯದ ಉಪನಗರಗಳಲ್ಲಿ ನೆಲೆಸುತ್ತಿದ್ದಾರೆ. ಕೆಲಸದ ಜಾಗಕ್ಕೂ ಮನೆಗೂ ಇದರಿಂದ ಬಹಳಷ್ಟು ದೂರವಾಗುವುದರಿಂದ , ದೈನಂದಿನ ಜೀವನದಲ್ಲಿ ಗಣನೀಯ ವೇಳೆಯನ್ನು ಸಂಚಾರದಲ್ಲಿಯೇ ಕಳೆಯುವುದು ಮುಂಬಯಿ ಜೀವನದಲ್ಲಿ ಅನೇಕರಿಗೆ ಅನಿವಾರ್ಯವಾಗಿದೆ. ಇದು ಸಂಚಾರ ವ್ಯವಸ್ಥೆಯ ಮೇಲೂ ಅಸಾಧ್ಯ ಒತ್ತಡವನ್ನು ತರುತ್ತಿದೆ. ಮುಂಬಯಿಯ ಜನಸಂಖ್ಯೆಯ ಸುಮಾರು ೪೬-೪೮% ಜನ ಕೊಳೆಗೇರಿಗಳಲ್ಲಿ ವಾಸಿಸುತ್ತಿದ್ದಾರೆಂದು ಒಂದು ಅಂದಾಜಿದೆ. == ಮುಂಬಯಿಯಲ್ಲಿ ಕನ್ನಡಿಗರು == ಮುಂಬಯಿಯಲ್ಲಿ ಇತರೆ ದಕ್ಷಿಣ ಭಾರತೀಯರಂತೆ, ಸುಮಾರು , 25 ಲಕ್ಷ ಕನ್ನಡಿಗರು ವಾಸ್ತವ್ಯಹೂಡಿದ್ದಾರೆ. ಭಾಷಾವಾರು ಪ್ರಾಂತಗಳ ರಚನೆಗೆ ಮುನ್ನ , [[ಕರ್ನಾಟಕ|ಕರ್ನಾಟಕದ]] ಉತ್ತರ ಭಾಗದ ಕೆಲ ಪ್ರದೇಶಗಳು, ಅಂದಿನ ಮುಂಬಯಿ ಪ್ರಾಂತದ ಅಂಗವಾಗಿದ್ದರಿಂದ , ಈ ಪ್ರದೇಶಗಳ ಕನ್ನಡಿಗರು ಉದ್ಯೋಗಾವಕಾಶಗಳಿಗಾಗಿ ಮುಂಬಯಿಗೆ ಸಾಕಷ್ಟು ಸಂಖ್ಯೆಯಲ್ಲಿ ವಲಸೆ ಹೋಗಿ, ಕೆಲ ತಲೆಮಾರುಗಳಿಂದ ಮುಂಬಯಿಯ ನಾಗರೀಕರಾಗಿದ್ದಾರೆ. ಕ್ರಮೇಣ ಇತರ ಭಾಗಗಳ ಕನ್ನಡಿಗರೂ ಮುಂಬಯಿಯಲ್ಲಿ ನೆಲೆಯೂರಿದ್ದಾರೆ. "ಉಡುಪಿ ಹೋಟಲು" ಎಂದೇ ಪ್ರಖ್ಯಾತವಾಗಿರುವ ಮುಂಬಯಿಯ ಮಧ್ಯಮವರ್ಗೀಯ ಹೋಟೆಲು ಉದ್ಯಮದಲ್ಲಿ ಕರಾವಳಿ ಜಿಲ್ಲೆಗಳ ಕನ್ನಡಿಗರ ಪ್ರಾಬಲ್ಯವಿದೆ. ' == ಉದ್ಯಮಿಗಳು, ಕಲಾವಿದರು, ಕವಿಗಳು, ಹಾಗೂ ಶ್ರೇಷ್ಠ ಪತ್ರಿಕಾಕರ್ತರುಗಳು == ಅನೇಕ ಕನ್ನಡಿಗರು ಈ ನಗರದ ವಿವಿಧ ಕ್ಷೇತ್ರಗಳಲ್ಲಿ ಹೆಸರು ಮಾಡಿದ್ದಾರೆ. ಸಿನಿಮಾ (ಖ್ಯಾತ ನಿರ್ದೇಶಕ [[ಚಿ.ಗುರುದತ್|ಗುರುದತ್]], ನಟ/ನಟಿಯರಾದ [[ಶಿಲ್ಪಾ ಶೆಟ್ಟಿ]], [[ಸುನೀಲ್ ಶೆಟ್ಟಿ]],[[ಐಶ್ವರ್ಯಾ ರೈ]], '[[ಬಾಬಾ ಸಾಹೇಬ್ ಫಾಲ್ಕೆ ಪ್ರಶಸ್ತಿ ವಿಜೇತ]]', ಛಾಯಾಗ್ರಾಹಕ, [[ವಿ. ಕೆ. ಮೂರ್ತಿ|ವಿ.ಕೆ.ಮೂರ್ತಿ]] ಇತ್ಯಾದಿ), ಸಾಹಿತ್ಯ [[ಅಮರ ಚಿತ್ರ ಕಥೆಾ|ಅಮರ ಚಿತ್ರ ಕಥೆಯನ್ನು]] ಪ್ರಾರಂಭಿಸಿದ [[ಅನಂತ ಪೈ]], ಕನ್ನಡ ಸಾಹಿತ್ಯದಲ್ಲಿ ಹೆಸರಾದ [[ವ್ಯಾಸರಾಯ ಬಲ್ಲಾಳ]], [[ಯಶವಂತ ಚಿತ್ತಾಲ]], [[ಜಯಂತ ಕಾಯ್ಕಿಣಿ]], [[ಮಿತ್ರಾ ವೆಂಕಟ್ರಾಜ್]] ಇತ್ಯಾದಿ), ನಾಟಕ [[ಗಿರೀಶ್ ಕಾರ್ನಾಡ್|ಗಿರೀಶ್ ಕಾರ್ನಾಡರು]] , [[ಅನಂತ್ ನಾಗ್|ಅನಂತ ನಾಗ್]],[[ಶಂಕರ್ ನಾಗ್|ಶಂಕರ ನಾಗ್]] ಕೆಲಕಾಲ ಮುಂಬಯಿಯಲ್ಲಿದ್ದುದುಂಟು ), ಪತ್ರಿಕೋದ್ಯಮ [[ಎಂ. ವಿ. ಕಾಮತ್]], ಫ್ರೀ ಪ್ರೆಸ್ ಜರ್ನಲ್ ನ [[ಸದಾನಂದ್]], [[ಕರ್ನಾಟಕ ಮಲ್ಲ]] ಪತ್ರಿಕೆಯ,[[ಚಂದ್ರಶೇಖರ ಪಾಲೆತ್ತಾಡಿ]] ,ಮುಂತಾದವರು,ಮುಖ್ಯರು. == [[ಮುಂಬಯಿ ನಗರದ ಕನ್ನಡ ರಂಗಭೂಮಿ ಕಲಾವಿದರು]] == ಮುಂಬಯಿಯಲ್ಲಿ ಕನ್ನಡಿಗರ ಹಲವಾರು ಸಂಘ ಸಂಸ್ಥೆಗಳಿವೆ. ಅವುಗಳಲ್ಲಿ ಪ್ರಮುಖವಾದವುಗಳೆಂದರೆ, '[[ಮೈಸೂರ್ ಅಸೋಸಿಯೇಷನ್, ಮುಂಬಯಿ]], [[ಕರ್ನಾಟಕ ಸಂಘ, ಮುಂಬಯಿ|ಕರ್ನಾಟಕ ಸಂಘ]], ಮುಂಬಯಿಕನ್ನಡ ಸಂಘ, ಡೊಂಬಿವಲಿ ಕನ್ನಡಸಂಘ, ಗೋರೆಗಾಂ,ಮಲಾಡ್ ಹಾಗೂ ಕೋಟೆ ಕನ್ನಡ ಸಂಘಗಳು ಸೇರಿವೆ. ಇವೆಲ್ಲವೂ ತಮ್ಮದೇ ಆದ ದೊಡ್ಡ / ಸಣ್ಣ ಹರವಿನಲ್ಲಿ [[ಕನ್ನಡ|ಕನ್ನಡ ಭಾಷೆ]], ಸಂಸ್ಕೃತಿ, ಕಲೆ, ಕನ್ನಡತನವನ್ನು ಉಳಿಸಿ ಬೆಳೆಸುವಲ್ಲಿ ಶ್ರಮಿಸುತ್ತಿವೆ. ಕನ್ನಡ ರಂಗ ಭೂಮಿಯಲ್ಲಿ ಹಲವಾರು ಕಲಾವಿದರು ತಮ್ಮ ಅಮೂಲ್ಯವಾದ ಕೊಡುಗೆಯನ್ನು ಕೊಟ್ಟಿರುತ್ತಾರೆ. ಅವರಲ್ಲಿ ಪ್ರಮುಖರು, [[ಆರ್.ಡಿ ಕಾಮತ್]], ಶ್ರೀಪತಿ ಬಲ್ಲಾಳ್, ಕಿಶೋರಿ ಬಲ್ಲಾಳ್, [[ಸದಾನಂದ ಸುವರ್ಣ]], [[ಬಿ.ಆರ್.ಮಂಜುನಾಥ್|ಡಾ.ಬಿ.ಆರ್.ಮಂಜುನಾಥ್]], [[ಕೆ.ಮಂಜುನಾಥಯ್ಯ]],, [[ಬಾಲಕೃಷ್ಣ ನಿಡ್ವಣ್ಣಾಯ ಹಾಗೂ ಸತ್ಯಭಾಮಾ ನಿಡ್ವಣ್ಣಾಯ]] ದಂಪತಿಗಳು, (ದಿವಂಗತ)[[ಎ. ಎಸ್. ಕೆ ರಾವ್]], [[ಭರತ್ ಕುಮಾರ್ ಪೊಲಿಪು]], [[ಅಹಲ್ಯ ಬಲ್ಲಾಳ್]], ಸಾ ದಯಾ, ಶೈಲಿನಿ ರಾವ್, ಮೋಹನ್ ಮಾರ್ನಾಡ್, [[ಅವಿನಾಶ್ ಕಾಮತ್]], ಕುಸುಮ್ ಬಲ್ಲಾಳ್, ಮುಂತಾದವರು. == ಮುಂಬಯಿ ನಗರವಾಸಿ ಮತ್ತು ಸಂಸ್ಕೃತಿ == (contracted; show full) == ಪ್ರಸಾರ ಮಾಧ್ಯಮಗಳು == ಅನೇಕ ಪ್ರಕಾಶನ ಸಂಸ್ಥೆಗಳು, ವೃತ್ತ ಪತ್ರಿಕೆಗಳು, ಕಿರುತೆರೆ ವಾಹಿನಿಗಳು ಮುಂಬಯಿಯಿಂದ ಕಾರ್ಯನಿರ್ವಹಿಸುತ್ತಿವೆ.ಇಂಗ್ಲೀಷ್ ಪತ್ರಿಕೆಗಳಲ್ಲಿ ಮುಖ್ಯವಾದವುಗಳೆಂದರೆ,[[ಟೈಮ್ಸ್ ಆಫ್ ಇಂಡಿಯಾ]], [[ಇಂಡಿಯನ್ ಎಕ್ಸ್ ಪ್ರೆಸ್]], [[ಡಿ.ಎನ್.ಏ]], [[ಹಿಂದೂಸ್ತಾನ್ ಟೈಮ್ಸ್]] , [[ಮಿಡ್ ಡೇ]] ಇತ್ಯಾದಿ. [[ಮಹಾರಾಷ್ಟ್ರ ಟೈಮ್ಸ್]] , [[ಸಕಾಳ]], [[ಲೋಕಸತ್ತಾ]] , [[ಸಾಮನಾ]] ಮತ್ತು [[ನವಾಕಾಳ]] ಮುಖ್ಯ [[ಮರಾಠಿ]] ಪತ್ರಿಕೆಗಳು. ಇವಲ್ಲದೆ [[ಗುಜರಾತಿ ಭಾಷೆ|ಗುಜರಾತಿ]], [[ಕನ್ನಡ]], [[ತಮಿಳು]] ಮುಂತಾದ ಇತರೇ ಭಾಷೆಗಳ ಪತ್ರಿಕೆಗಳೂ ಮುಂಬಯಿಯಿಂದ ಹೊರಡುತ್ತವೆ. [[ಕರ್ನಾಟಕ ಮಲ್ಲ]],ಉದಯವಾಣಿ ಕನ್ನಡ ಪತ್ರಿಕೆ ಮುಂಬಯಿಂದ ಪ್ರಕಟವಾಗುತ್ತಿವೆ. ಭಾರತದ ಅತಿ ಹಳೆಯ ದಿನಪತ್ರಿಕೆ ಎಂದು ಹೆಸರಾಗಿರುವ [[ಬಾಂಬೇ ಸಮಾಚಾರ್]] ಎಂಬ ಪತ್ರಿಕೆ [[ಗುಜರಾತಿ ಭಾಷೆ|ಗುಜರಾತಿ]] ಮತ್ತು ಇಂಗ್ಲೀಷಿನಲ್ಲಿ ಮುಂಬಯಿಯಿಂದ ೧೮೨೨ರಿಂದಲೂ ಪ್ರಕಟವಾಗುತ್ತಿದೆ. ಅನೇಕ ಕಿರುತೆರೆ ವಾಹಿನಿಗಳ ಕೇಂದ್ರ ಮತ್ತು ಪ್ರಾದೇಶಿಕ ಕಚೇರಿಗಳು ಮುಂಬಯಿಯಲ್ಲಿವೆ. ದೂರದರ್ಶನದ ಎರಡು ಕಿರುತೆರೆ ವಾಹಿನಿಗಳೊಂದಿಗೆ, ಮೂರು ಮುಖ್ಯ ಕೇಬಲ್ ಟಿವಿ ಜಾಲಗಳು ಮುಂಬಯಿಯ ಬಹುತೇಕ ಮನೆಗಳನ್ನು ತಲುಪಿವೆ.[[ಉಪಗ್ರಹ ಟಿವಿ]] (DTH) ಈಗಿನ್ನೂ (೨೦೦೬ರಲ್ಲಿ) ಪ್ರವೇಶಮಾಡುತ್ತಿದ್ದು ಬರುವ ದಿನಗಳಲ್ಲಿ ಹೆಚ್ಚು ಹೆಚ್ಚು ಜನಪ್ರಿಯವಾಗುವ ಸಂಭವವಿದೆ. ೨೦೦೬ರ ಕೊನೆಯಿಂದ ನಗರದ ಅನೇಕ ಕಡೆಗಳಲ್ಲಿ [[Conditional Access System]] (CAS) ಮೂಲಕವೇ ಟಿವಿ ವಾಹಿನಿಗಳ ಪ್ರಸಾರವನ್ನು ಕಡ್ಡಾಯ ಮಾಡಲಾಗಿದೆ. ಕೇಬಲ್ ಟಿವಿ ಜಾಲಗಳ ಮೇಲೆ DTH ಮತ್ತು CASಗಳ ಪರಿಣಾಮ ಏನೆಂದು ಈಗಲೇ ಊಹಿಸುವುದು ಅಸಾಧ್ಯವಾದರೂ, ಈ ಉದ್ಯಮ ಇನ್ನು ಕೆಲವರ್ಷಗಳಲ್ಲಿ ಮಹತ್ತರ ಬದಲಾವಣೆಯನ್ನು ಹೊಂದುವುದರಲ್ಲಿ ಏನೂ ಸಂಶಯವಿಲ್ಲ. ಮುಂಬಯಿಯಲ್ಲಿ ಒಂಭತ್ತು ರೇಡಿಯೋ ಸ್ಟೇಷನುಗಳಿದ್ದು , ಇದರಲ್ಲಿ ಆರು FM ತರಂಗಗಳಲ್ಲಿ ಪ್ರಸಾರಮಾಡಿದರೆ, ಬಾಕಿ ಮೂರು [[ಆಕಾಶವಾಣಿರೇಡಿಯೋ|ಆಕಾಶವಾಣಿಯ]] AM ತರಂಗಗಳಲ್ಲಿ ಪ್ರಸಾರವಾಗುತ್ತಿದೆ. FM ಕೇಂದ್ರಗಳು ಕಳೆದ ಕೆಲ ವರ್ಷಗಳಲ್ಲಿ ಪ್ರಾರಂಭವಾಗಿದ್ದು ಈಗಾಗಲೇ ಸಾಕಷ್ಟು ಜನಪ್ರಿಯತೆಯನ್ನು ಗಳಿಸಿಕೊಂಡಿವೆ. == ಶಿಕ್ಷಣ == (contracted; show full) ಮುಂಬಯಿ ಅತಿ ಜನಪ್ರಿಯ ಆಟ ಎಂದರೆ [[ಕ್ರಿಕೆಟ್]]. ನಗರದಲ್ಲಿರುವ ಅನೇಕ ಮೈದಾನಗಳಲ್ಲಿಯೇ ಏಕೆ, ಗಲ್ಲಿ ಕ್ರಿಕೆಟ್ ಎಂದೇ ಹೆಸರಾಗಿರುವ , ಸಣ್ಣ ಪುಟ್ಟ ಓಣಿಗಳಲ್ಲಿಯೂ ಸಮಯ ಸಿಕ್ಕಾಗಲೆಲ್ಲ [[ಕ್ರಿಕೆಟ್]] ಆಡುವುದನ್ನು ಕಾಣಬಹುದು. ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿಯ ಮುಖ್ಯ ಕಚೇರಿ ಮುಂಬಯಿಯಲ್ಲಿದೆ. ಮುಂಬಯಿಯ [[ಬ್ರಬೋರ್ನ್]] ಮತ್ತು [[ವಾಂಖೇಡೆ]] ಕ್ರೀಡಾಂಗಣಗಳು ಅಂತರರಾಷ್ಟ್ರೀಯ ಮಟ್ಟದವುಗಳಾಗಿವೆ. ಭಾರತದ ಕ್ರಿಕೆಟ್ಟಿನ ತವರು ಮನೆ ಎಂದೇ ಕರೆಯಬಹುದಾದ ಮುಂಬಯಿ, ಅನೇಕ ಪ್ರತಿಭಾವಂತ ಕ್ರಿಕೆಟರುಗಳನ್ನು ಭಾರತ ತಂಡಕ್ಕೆ ನೀಡಿದೆ. ಇಂದಿನ [[ಸಚಿನ್ ತೆಂಡೂಲ್ಕರ್]], [[ಅಜಿತ್ ಅಗರಕರ್]] ಹಿಂದಿನ [[ಅಜಿತ್ ವಾಡೇಕರ್]] , [[ಸುನೀಲ್ ಗಾವಸ್ಕರ್|ಸುನೀಲ್ ಗವಾಸ್ಕರ್]], [[ಫಾರೂಖ್ ಇಂಜಿನಿಯರ್]] , [[ವಿನೋದ್ ಕಾಂಬ್ಳಿ]],[[ವಿಜಯ್ ಮಾಂಜ್ರೇಕರ್]] ಇವರುಗಳು ಮುಂಬಯಿ ಖ್ಯಾತ ಕ್ರಿಕೆಟಿಗರಲ್ಲಿ ಕೆಲವೇ ಕೆಲವರು. [[ರಣಜೀ ಟ್ರೋಫಿ|ರಣಜೀ ಟ್ರೋಫಿಯನ್ನು]] ಕಳೆದ ಎಪ್ಪತ್ತೆರಡು ವರ್ಷಗಳಲ್ಲಿ ಮೂವತ್ತಾರು ಬಾರಿ (೨೦೦೫-೦೬ರವರೆಗೆ) ಗೆದ್ದಿರುವ ಮುಂಬಯಿಯ ದಾಖಲೆಯನ್ನು ಮುರಿಯುವುದು ಸುಲಭ ಸಾಧ್ಯವಲ್ಲ. ಎಪ್ಪತ್ತರ ದಶಕದಲ್ಲಿ ಭಾರತದ ಕ್ರಿಕೆಟ್ ತಂಡದಲ್ಲಿ ಏಳು-ಎಂಟು ಆಟಗಾರರು ಮುಂಬಯಿಯವರೇ ಆಗಿರುತ್ತಿದ್ದುದುಂಟು. ಆದರೆ , ಈಚೀಚೆಗೆ, ಭಾರತದ ಇತರ ಪ್ರದೇಶಗಳು, ಕರ್ನಾಟಕವೂ ಸೇರಿದಂತೆ , ಕ್ರಿಕೆಟಿನಲ್ಲಿ ಮುಂಬಯಿಗೆ ತೀವ್ರ ಸ್ಪರ್ಧೆಯನ್ನು ಒಡ್ಡಿದ್ದು ಮುಂಬಯಿ ತನ್ನ ಮೊದಲಿನ ಅತಿವಿಶಿಷ್ಟ ಸ್ಥಾನವನ್ನು ಕಳೆದುಕೊಂಡಿದೆ. [[ಫುಟ್ ಬಾಲ್]] ಸಹಾ ಮುಂಬಯಿಯ ಅತಿ ಜನಪ್ರಿಯ ಕ್ರೀಡೆ. ಮುಖ್ಯವಾಗಿ ಮಳೆಗಾಲದಲ್ಲಿ ಕಾಣಬರುವ ಈ ಕ್ರೀಡೆ, ಲೀಗ್ ಪಂದ್ಯಾವಳಿಗಳಿಂದ ಇನ್ನೂ ಜೀವಂತವಾಗಿದೆ. [[ಹಾಕಿ]] ಆಟವು ಮೊದಲಿನ ಘನತೆಯನ್ನು ಕಳೆದುಕೊಂಡಿದ್ದರೂ, ಮುಂಬಯಿಯ ಅನೇಕ ಹಾಕೀ ಆಟಗಾರರು ಭಾರತವನ್ನು ಪ್ರತಿನಿಧಿಸಿದ್ದಾರೆ. ಮುಂಬಯಿಯ ಇತರ ಕ್ರೀಡೆಗಳೆಂದರೆ [[ಟೆನ್ನಿಸ್]], [[ಸ್ಕ್ವಾಶ್]], [[ಬಿಲಿಯರ್ಡ್ಸ್]], [[ಬ್ಯಾಡ್ಮಿಂಟನ್|ಬ್ಯಾಡ್ಮಿಂಟನ್]], [[ಟೇಬಲ್ ಟೆನ್ನಿಸ್]] ಮತ್ತು [[ಗಾಲ್ಫ್]]. [[ರಗ್ಬೀ]] ಆಟ ಕಾಣಸಿಗುವ ಭಾರತದ ಕೆಲವೇ ಕೆಲವು ನಗರಗಳಲ್ಲಿ ಮುಂಬಯಿಯೂ ಒಂದು.[[ವಾಲಿಬಾಲ್]] ಮತ್ತು [[ಬ್ಯಾಸ್ಕೆಟ್‌ಬಾಲ್|ಬ್ಯಾಸ್ಕೆಟ್ ಬಾಲ್]] ಕೂಡಾ ಶಾಲಾಕಾಲೇಜುಗಳಲ್ಲಿ ಜನಪ್ರಿಯವಾಗಿವೆ. ಕುದುರೆ ರೇಸಿನ ಪ್ರಿಯರಿಗಾಗಿ [[ಮಹಾಲಕ್ಷ್ಮಿ ರೇಸ್ ಕೋರ್ಸ್]] ಇದೆ. ಪ್ರತಿ ಫೆಬ್ರುವರಿಯಲ್ಲಿ ನಡೆಯುವ [[ಡರ್ಬಿ]] , ಭಾರತದ ಪ್ರತಿಷ್ಠಿತ ರೇಸುಗಳಲ್ಲಿ ಒಂದು. == ಇದನ್ನೂ ನೋಡಿ == * [[ಪುರಾತನ ಮುಂಬಯಿ ನಗರದ ಏಳು ದ್ವೀಪಗಳ ಭೂಭಾಗಗಳು]] == ಹೆಚ್ಚಿನ ಮಾಹಿತಿಗಾಗಿ == * [[ಹೊರನಾಡ ಕನ್ನಡ ಸಂಸ್ಥೆಗಳು]] * [http://www.mcgm.gov.in/ ಬೃಹನ್ ಮುಂಬಯಿ ಮಹಾನಗರಪಾಲಿಕೆಯ ಅಧಿಕೃತ ತಾಣ ] * [http://theory.tifr.res.in/bombay/ ಮುಂಬಯಿ ಪುಟಗಳು: ಮುಂಬಯಿ ನಗರದ ಸಂಪೂರ್ಣ ಮಾರ್ಗದರ್ಶಿ - (ಟಾಟಾ ಮೂಲಭೂತ ಸಂಶೋಧನಾ ಸಂಸ್ಥೆಯಿಂದ)] * [http://mdmu.maharashtra.gov.in/pages/Mumbai/mumbaiplanShow.php ಮುಂಬಯಿ ನಗರದ ಅಧಿಕೃತ ವರದಿ ] * [http://www.bombay-india.net/ ಮುಂಬಯಿ ನಗರ ಮಾರ್ಗದರ್ಶಿ ] * [http://thegreatindian.tripod.com/mumbai.htm ಮುಂಬಯಿ ನಗರದ ಪಕ್ಷಿನೋಟ ( ಅಪರೂಪದ ಫೋಟೋ)] {{ಭಾರತದ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ರಾಜಧಾನಿಗಳು}} [[ವರ್ಗ:ಮಹಾರಾಷ್ಟ್ರದ ಪಟ್ಟಣಗಳು]] [[ವರ್ಗ:ಭಾರತದ ಪಟ್ಟಣಗಳು]] [[ವರ್ಗ:ಭೂಗೋಳ]] All content in the above text box is licensed under the Creative Commons Attribution-ShareAlike license Version 4 and was originally sourced from https://kn.wikipedia.org/w/index.php?diff=prev&oldid=803809.
![]() ![]() This site is not affiliated with or endorsed in any way by the Wikimedia Foundation or any of its affiliates. In fact, we fucking despise them.
|