Difference between revisions 819307 and 819309 on knwiki

{{ಅಳಿಸುವಿಕೆ|ಪ್ರಬಂಧ ಮಾದರಿಯ ಲೇಖನ. ವಿಶ್ವಕೋಶದ ಲೇಖನದ ಸ್ವರೂಪದಲ್ಲಿಲ್ಲ}}
 

'''ಜಾತ್ಯಾತೀತತೆ''' ಜಾತಿ, ಜಾತ್ಯಾತೀತತೆ, ಹಿಂದೂ, ಹಿಂದುತ್ವ ಎಂಬ ಪದಗಳು ಬಹಳ ಹಳೆಯ ಪದಗಳಾದರೂ ಅವುಗಳ ಹುಟ್ಟು ಬೆಳವಣಿಗೆಯಲ್ಲಿ ನಿರಂತರ ಚರ್ಚೆ, ವಾಗ್ವಾದ, ತಪ್ಪು ಅರ್ಥೈಸುವಿಕೆ ಮೊದಲಾದ ಗೊಂದಲಗಳಲ್ಲಿ ಸದಾ ಪ್ರಸ್ತುತ ವಿಷಯಗಳಾಗಿ ನಮ್ಮ ಮನಸ್ಸಿನ ಜಾಗೃತ ವಲಯವನ್ನು ದ್ವಂದ್ವಕ್ಕೆ ಸಿಲುಕಿಸುತ್ತಲೇ ಬಂದಿವೆ. 
(contracted; show full)ಲ. ಸಕಳ ಮಾನವರಲ್ಲಿ ಸಂಬಂಧ, ಸಹೋದರತೆಗಳನ್ನು ಬೆಳೆಸುವುದರಲ್ಲಿ ವಿಫಲತೆಯನ್ನು ಪಡೆಯುತ್ತೇವೆ.  ಸಂಘರ್ಷ, ಭಯೋತ್ಪಾದನೆಗಳನ್ನು ಸುತ್ತಲೂ ಬೆಳೆಸಿಕೊಂಡು ಕೋಮುದಳ್ಳುರಿಗಳಿಂದ ಜೀವನ ನಡೆಸಬೇಕಾಗುತ್ತದೆ. ಇದರಿಂದ ತಾತ್ಕಾಲಿಕ ಹರ್ಷದ ಭ್ರಮೆ ಮನುಷ್ಯನನ್ನು ಆವರಿಸಿ ನಿರ್ನಾಮದ ದಾರಿಗೆ ತಳ್ಳುತ್ತದೆ.  ಅದರಿಂದ ಜಾತ್ಯಾತೀತತೆಯನ್ನು ಸರಿಯಾದ ರೀತಿಯಲ್ಲಿ ಅರ್ಥಮಾಡಿಕೊಳ್ಳಬೇಕಿದೆ.  ಅದನ್ನು ತಪ್ಪಾಗಿ ವಿವರಿಸಿ ಅಪಾರ್ಥಗೊಳಿಸುವುದರಿಂದ ಮಾನವನ ಸಾಂಘಿಕಜೀವನಕ್ಕೆ ದಕ್ಕೆಯೇ ಹೊರತು ಏನೂ ಸಾಧಿಸಿದಂತೆ ಆಗುವುದಿಲ್ಲ. ಜಾತಿವಾದ, ಕೋಮುವಾದ, ಲಿಂಗತಾರತಮ್ಯ, ವರ್ಗಗಳಲ್ಲಿ ಅಸಮಾನತೆಗಳು, ಶೋಷಣೆ ಮಾಡುವುದು ಜಾತ್ಯಾತೀತತೆಯ ವಿರೋಧಿ ನಿಲುವುಗಳಾಗಿವೆ.