Difference between revisions 820949 and 850978 on knwiki

{{Infobox ಭಾರತದ ಭೂಪಟ
| native_name = ಮುಂಬಯಿ
| other_name = ಮುಂಬಯಿ
| type = metropolitan city
| type_2 = capital
| skyline= Gateway.jpg
| skyline_caption= ಗೇಟ್‍ವೇ ಅಫ್ ಇ೦ಡಿಯಾ
| locator_position = left
(contracted; show full)

ಎಪ್ಪತ್ತರ ದಶಕದಲ್ಲಿ ಮುಂಬಯಿಯಲ್ಲಿ ಕಟ್ಟಡ ನಿರ್ಮಾಣ ಉದ್ಯಮ ಭರದಿಂದ ಪ್ರಗತಿಯಾಗಿ , ದೊಡ್ಡಪ್ರಮಾಣದಲ್ಲಿ ಪರಪ್ರಾಂತೀಯರ ವಲಸೆ ಮುಂಬಯಿಯತ್ತ ಹರಿದುಬಂದಿತು. ಇದೇ ಕಾಲದಲ್ಲಿ ಮುಂಬಯಿ [[ಕೋಲ್ಕತ್ತಾ|ಕೋಲ್ಕತ್ತಾವನ್ನು]] ಹಿಂದೆ ಹಾಕಿ [[ಭಾರತ|ಭಾರತದ]] ಅತಿ ಹೆಚ್ಚು ಜನಸಂಖ್ಯೆಯುಳ್ಳ ನಗರ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಹೆಚ್ಚುತ್ತಿದ್ದ ಪರಪ್ರಾಂತೀಯರ ಸಂಖ್ಯೆಯಿಂದ ಸ್ಥಳ
ಿಯರಲ್ಲಿ ಅಸಮಾಧಾನ ಹೊಗೆಯಾಡತೊಡಗಿತು. ಇದರ ಪರಿಣಾಮವಾಗಿ, ಸ್ಥಳೀಯ ನಾಗರೀಕರ ಹಿತರಕ್ಷಣೆಯ ಧ್ಯೇಯಹೊತ್ತ [[ಶಿವಸೇನಾ]] ಎಂಬ ರಾಜಕೀಯ ಸಂಘಟನೆಯ ಉದಯವಾಯಿತು. [[ಬಾಳಾಸಾಹೇಬ ಠಾಕರೆ|ಬಾಳಾಸಾಹೇಬ ಠಾಕರೆಯವರ]] ನೇತೃತ್ವದ ಈ ಸಂಘಟನೆಗೆ ಸ್ಥಳೀಯರ ಪ್ರಚಂಡ ಬೆಂಬಲ ದೊರಕಿ, ಅದು ಒಂದು ಪ್ರಬಲ ರಾಜಕೀಯ ಶಕ್ತಿಯಾಗಿ ರೂಪುಗೊಳ್ಳಲು ಸಹಾಯಕವಾಯಿತು.


== ಭೂಗೋಳ ==
[[ಭಾರತ|ಭಾರತದ]] ಪಶ್ಚಿಮ ತೀರದ , [[ಕೊಂಕಣ]] ಪ್ರದೇಶದಲ್ಲಿರುವ [[ಉಲ್ಹಾಸ ನದಿ|ಉಲ್ಹಾಸ ನದಿಯ]] ಮುಖಜ ಪ್ರದೇಶವಾಗಿರುವ [[ಶಾಸ್ತಿ ದ್ವೀಪ|ಶಾಸ್ತಿ ದ್ವೀಪದ]] (ಸ್ಥಳೀಯ ಬಳಕೆಯಲ್ಲಿ ಸಾಲ್ಸೆಟ್) ಒಂದು ಭಾಗ ಮುಂಬಯಿ ನಗರ. ಇಲ್ಲಿಯ ಬಹುತೇಕ ಭಾಗ ಸಮುದ್ರ ಮಟ್ಟದಲ್ಲಿದ್ದು, ಸರಾಸರಿ ಎತ್ತರ (ಸಮುದ್ರ ಮಟ್ಟದಿಂದ) ೧೦ರಿಂದ ೧೫ ಮೀಟರಿನಷ್ಟಿದೆ. ಮುಂಬಯಿಯ ಉತ್ತರ ಭಾಗವು ಗುಡ್ಡಗಾಡಾಗಿದ್ದು , ೪೫೦ ಮೀಟರು ಅತಿ ಎತ್ತರದ ಭಾಗವಾಗಿದೆ. ಮುಂಬಯಿಯ ವಿಸ್ತೀರ್ಣ ೪೬೮ ಚದರ ಕಿ.ಮೀ. 
(contracted; show full)* [http://www.bombay-india.net/ ಮುಂಬಯಿ ನಗರ ಮಾರ್ಗದರ್ಶಿ ]
* [http://thegreatindian.tripod.com/mumbai.htm ಮುಂಬಯಿ ನಗರದ ಪಕ್ಷಿನೋಟ ( ಅಪರೂಪದ ಫೋಟೋ)]

{{ಭಾರತದ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ರಾಜಧಾನಿಗಳು}}

[[ವರ್ಗ:ಮಹಾರಾಷ್ಟ್ರದ ಪಟ್ಟಣಗಳು]]
[[ವರ್ಗ:ಭಾರತದ ಪಟ್ಟಣಗಳು]]
[[ವರ್ಗ:ಭೂಗೋಳ]]