Difference between revisions 859689 and 859692 on knwiki

{{Infobox ಭಾರತದ ಭೂಪಟ
| native_name = ಮುಂಬಯಿ
| other_name = ಮುಂಬಯಿ
| type = metropolitan city
| type_2 = capital
| skyline= Gateway.jpg
| skyline_caption= ಗೇಟ್‍ವೇ ಅಫ್ ಇ೦ಡಿಯಾ
| locator_position = left
(contracted; show full)

ಮುಂಬಯಿ ಮಹಾನಗರವನ್ನು ನಗರ ಮತ್ತು ಉಪನಗರ ಎಂದು ಎರಡು ಪ್ರದೇಶಗಳಾಗಿ ವಿಂಗಡಿಸಲಾಗಿದ್ದು, ಇವೆರಡೂ ಮಹಾರಾಷ್ಟ್ರದ ಪ್ರತ್ಯೇಕ ಜಿಲ್ಲೆಗಳೂ ಆಗಿವೆ. ಇದರಲ್ಲಿ ನಗರ ಪ್ರದೇಶವನ್ನು ದ್ವೀಪ ನಗರ ( Island City) ಎಂದೂ ಕರೆಯಲಾಗುತ್ತದೆ.
== ಹವಾಮಾನ ==
ಉಷ್ಣವಲಯದಲ್ಲಿ ಹಾಗೂ ಸಮುದ್ರದದಂಡೆಯಲ್ಲಿರುವ ಮುಂಬಯಿಯಲ್ಲಿ ಎರಡು ಋತುಗಳು ಮುಖ್ಯವಾಗಿವೆ.

'''ಆರ್ದ್ರ ಹವಾಮಾನ''' ಮಾರ್ಚ
ಿಯ್ ನಿಂದ ಆಕ್ಟೋಬರ್ ವರೆಗಿದ್ದು , ಈ ಕಾಲದಲ್ಲಿ ವಾತಾವರಣದಲ್ಲಿ ನೀರಿನಂಶ ಹೆಚ್ಚಿರುತ್ತದೆ. ದಿನದ ತಾಪಮಾನ ೩೦ ಡಿಗ್ರಿ ಸೆಂಟಿಗ್ರೇಡ್ ವರೆಗಿರುತ್ತದೆ. ಜೂನಿನಿಂದ ಸೆಪ್ಟೆಂಬರಿನವರೆಗೂ ಅನುಭವಕ್ಕೆ ಬರುವ ಮಳೆಗಾಲದಲ್ಲಿ ಜಡಿಮಳೆ ಸಾಮಾನ್ಯ. ಸರಾರಿ ವಾರ್ಷಿಕ ಮಳೆ ೨೨೦೦ ಮಿ.ಮೀ. ೧೯೫೪ರಲ್ಲಿ ಬಿದ್ದ ೩೪೫೨ ಮಿ.ಮೀ ಮಳೆ ವಾರ್ಷಿಕ ದಾಖಲೆಯಾದರೆ, ಜುಲೈ ೨೬, ೨೦೦೫ ರಂದು ಬಿದ್ದ ೯೪೪ ಮಿ.ಮೀ ಮಳೆ ಒಂದೇ ದಿನದಲ್ಲಿ ಬಿದ್ದ ಅತಿ ಹೆಚ್ಚು ಮಳೆ.

ನವೆಂಬರಿನಿಂದ ಫೆಬ್ರುವರಿಯವರೆಗೆ '''ಒಣ ಹವೆ'''ಯಿರುತ್ತದೆ. ವಾತಾವರಣವೂ ತಕ್ಕಮಟ್ಟಿಗೆ ತಂಪಾಗಿರುತ್ತದೆ. ಉತ್ತರದಿಂದ ಬೀಸುವ ತಂಗಾಳಿಯೇ ಈ ಬದಲಾವಣೆಗೆ ಕಾರಣ. ವಾರ್ಷಿಕ ತಾಪಮಾನ ಗರಿಷ್ಠ ೩೮ ಡಿಗ್ರಿ ಇದ್ದರೆ, ಕನಿಷ್ಠ ೧೧ ಡಿಗ್ರಿಯವರೆಗಿರುತ್ತದೆ. ೪೩ ಡಿಗ್ರಿ ಮತ್ತು ೭.೪ ಡಿಗ್ರಿ , ಕ್ರಮವಾಗಿ, ಅತಿ ಹೆಚ್ಚು ಮತ್ತು ಅತಿ ಕಡಿಮೆ ತಾಪಮಾನದ ದಾಖಲೆಗಳು.


== ಅರ್ಥ ವ್ಯವಸ್ಥೆ ==
ಮುಂಬಯಿಯನ್ನು ಭಾರತದ ಆರ್ಥಿಕ ರಾಜಧಾನಿ ಎನ್ನಲಾಗುತ್ತದೆ. ಭಾರತದ ೧೦% ಔದ್ಯೋಗಿಕ ಕಾರ್ಮಿಕರು ಮುಂಬಯಿಯಲ್ಲಿದ್ದಾರೆ. [[ಭಾರತ|ಭಾರತದ]] ಆದಾಯ ತೆರಿಗೆಯ ೪೦%, ಕೇಂದ್ರ ಅಬಕಾರಿಯ (Central excise) ೨೦%, ಕಸ್ಟಮ್ಸ್ ಸುಂಕದ ೬೦% , ರಫ್ತು ವ್ಯಾಪಾರದ ೪೦% , ಅಷ್ಟೇ ಅಲ್ಲ ೪೦ ಬಿಲಿಯನ್ ರೂಪಾಯಿಯ ವ್ಯಾವಸಾಯಿಕ ತೆರಿಗೆ (Professional Tax) ಮುಂಬಯಿಯಿಂದ ಬರುತ್ತದೆ. ಭಾರತದ ಪ್ರಮುಖ ಆರ್ಥಿಕ ಸಂಸ್ಥೆಗಳು ಮುಂಬಯಿಯಲ್ಲಿದ್ದು, [[ಮುಂಬೈ ಷೇರುಪೇಟೆ|ಮುಂಬಯಿ ಶೇರು ಬಜಾರು]], [[ಭಾರತೀಯ ರಿಸರ್ವ್ ಬ್ಯಾಂಕ್]] , [[ನ್ಯಾಷನಲ್ ಸ್ಟಾಕ್ ಎಕ್ಸ್ ಚೇಂಜ್]] ಇವೇ ಅಲ್ಲದೇ [[ಟಾಟಾ]], [[ಗೋದ್ರೇಜ್]] ಮತ್ತು [[ರಿಲಯನ್ಸ್(contracted; show full)* [http://www.bombay-india.net/ ಮುಂಬಯಿ ನಗರ ಮಾರ್ಗದರ್ಶಿ ]
* [http://thegreatindian.tripod.com/mumbai.htm ಮುಂಬಯಿ ನಗರದ ಪಕ್ಷಿನೋಟ ( ಅಪರೂಪದ ಫೋಟೋ)]

{{ಭಾರತದ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ರಾಜಧಾನಿಗಳು}}

[[ವರ್ಗ:ಮಹಾರಾಷ್ಟ್ರದ ಪಟ್ಟಣಗಳು]]
[[ವರ್ಗ:ಭಾರತದ ಪಟ್ಟಣಗಳು]]
[[ವರ್ಗ:ಭೂಗೋಳ]]