Difference between revisions 859692 and 859694 on knwiki{{Infobox ಭಾರತದ ಭೂಪಟ | native_name = ಮುಂಬಯಿ | other_name = ಮುಂಬಯಿ | type = metropolitan city | type_2 = capital | skyline= Gateway.jpg | skyline_caption= ಗೇಟ್‍ವೇ ಅಫ್ ಇ೦ಡಿಯಾ | locator_position = left (contracted; show full) == ರಾಜ್ಯ-ಸರಕಾರ ಹಾಗೂ ಮಹಾನಗರಪಾಲಿಕೆ == [[ಬೃಹನ್ಮುಂಬಯಿ ಮಹಾನಗರಪಾಲಿಕೆ]] ಈ ನಗರದ ಮೂಲಭೂತ ಅವಶ್ಯಕತೆಗಳಾದ ನೀರು ಸರಬರಾಜು, ಸಂಚಾರ ವ್ಯವಸ್ಥೆ ಇತ್ಯಾದಿಗಳನ್ನು ನಿರ್ವಹಿಸುತ್ತದೆ. ಕಮೀಷನರ್ ಇದರ ಆಡಳಿತಾತ್ಮಕ ಮುಖ್ಯಾಧಿಕಾರಿಯಾಗಿದ್ದು, ಐ.ಏ.ಎಸ್ ಹುದ್ದೆಯ ಈ ಅಧಿಕಾರಿಯನ್ನು [[ಮಹಾರಾಷ್ಟ್ರ]] ಸರಕಾರ ನೇಮಿಸುತ್ತದೆ. ಆಡಳಿತಾನುಕೂಲಕ್ಕಾಗಿ ನಗರವನ್ನು ೧೪ ಉಪವಿಭಾಗಗಳಾಗಿ ವ ೀಿಭಾಗಿಸಿದ್ದು , ಪ್ರತಿಯೊಂದು ಉಪವಿಭಾಗವನ್ನೂ ಒಬ್ಬೊಬ್ಬ ಉಪ-ಕಮೀಷನರ್ ನೋಡಿಕೊಳ್ಳುತ್ತಾರೆ. ಮಹಾಪಾಲಿಕೆಯಲ್ಲಿ ಜನರಿಂದ ಚುನಾಯಿತರಾದ ೨೨೭ ನಗರಸೇವಕರು (ಕಾರ್ಪೋರೇಟರುಗಳು), ೫ ನಾಮಕರಣ ಮಾಡಲ್ಪಟ್ಟ ನಗರಸೇವಕರು ಹಾಗೂ ಒಬ್ಬ ಮಹಾಪೌರ (ಮೇಯರ್ ) ಇರುತ್ತಾರೆ. ರಾಜ್ಯದ ಸಾಧಾರಣ ಎರ್ಲಲಾ ರಾಜಕೀಯ ಪಕ್ಷಗಳ ಉಮೇದುವಾರರನ್ನೂ ಈ ನಗರಪಾಲಿಕೆಯ ಚುನಾವಣೆಗಳಲ್ಲಿ ಕಾಣಬಹುದು. ಮುಂಬಯಿ ಪೋಲೀಸ್ ರಾಜ್ಯದ ಗೃಹ ಖಾತೆಯ ಅಧೀನದಲ್ಲಿ ಕೆಲಸಮಾಡುತ್ತದೆ. ಐ.ಪಿ.ಎಸ್ ದರ್ಜೆಯ ,ಕಮೀಷನರ್ ಮುಂಬಯಿ ಪೋಲೀಸ್ ಪಡೆಯ ಮುಖ್ಯಾಧಿಕಾರಿ. ಮುಂಬಯಿ ನಗರವನ್ನು ಏಳು ಪೋಲೀಸ್ ವಲಯಗಳಾಗಿಯೂ, ಹದಿನೇಳು ವಾಹನ ಸಾರಿಗೆ (traffic) ಪೋಲೀಸ್ ವಲಯಗಳಾಗಿಯೂ ವಿಭಜಿಸಲಾಗಿದ್ದು, ಪ್ರತಿಯೊಂದು ವಲಯಕ್ಕೂ ಒಬ್ಬ ಡೆಪ್ಯುಟಿ ಕಮೀಷನರ್ ನೇತೃತ್ವವಿದೆ. ವಾಹನ ಸಾರಿಗೆ ಪೋಲೀಸ್ ಮುಂಬಯಿ ಪೋಲಿಸಿಗೆ ಸೇರಿದೆ ಅರೆ-ಸ್ವಾಯತ್ತ ಪಡೆಯಾಗಿದೆ. ಮುಂಬಯಿಯಲ್ಲಿರುವ ಉಚ್ಚ ನ್ಯಾಯಾಲಯದ ವ್ಯಾಪ್ತಿ , ಕೇವಲ ಮಹಾರಾಷ್ಟ್ರ ರಾಜ್ಯಕ್ಕಷ್ಟೇ ಅಲ್ಲದೇ ಗೋವಾ ರಾಜ್ಯ , ಕೇಂದ್ರಾಡಳಿತ ಪ್ರದೇಶಗಳಾದ ದಮನ್,ದಿಯು , ದಾದ್ರ ಮತ್ತು ನಗರಹವೇಲಿ ಗಳಿಗೂ ಹಬ್ಬಿದೆ. ಇದಲ್ಲದೆ , ಸಿವಿಲ್ ಪ್ರಕರಣಗಳಿಗಾಗಿ ಸಣ್ಣ ವ್ಯಾಜ್ಯಗಳ ನ್ಯಾಯಾಲಯ (Small Causes Court) ಮತ್ತು ಕ್ರಿಮಿನಲ್ ಪ್ರಕರಣಗಳಿಗಾಗಿ ಸೆಷನ್ಸ್ ನ್ಯಾಯಾಲಯಗಳೂ ಇವೆ. ೬ ಜನ ಸಂಸತ್ತಿನಲ್ಲಿಯೂ, ೩೪ ಜನ ವಿಧಾನ ಮಂಡಲದಲ್ಲಿಯೂ ಮುಂಬಯಿಯನ್ನು ಪ್ರತಿನಿಧಿಸುತ್ತಾರೆ. ಈಗ, [[ಶಿವಸೇನ ಪಕ್ಷ]], ಬಹುಮತದಿಂದ ಗೆದ್ದು ಆಯ್ಕೆಯಾಗಿದೆ. ಬೃಹನ್ ಮುಂಬಯಿ ನಗರಪಾಲಿಕೆಯ ಅಧಿಕಾರವಹಿಸಿಕೊಂಡಿದೆ. ಇನ್ನು ನಾಲ್ಕು ವರೆ ವರ್ಷದ ಪ್ರಗತಿಕಾರ್ಯಗಳನ್ನೆಲ್ಲಾ, ಅದೇ ನಿರ್ವಹಿಸಬೇಕಾಗಿದೆ. ⏎ ⏎ == ಸಂಚಾರ ವ್ಯವಸ್ಥೆ == ಮುಂಬಯಿಯ ನಾಗರೀಕರು ದೈನಂದಿನ ಸಂಚಾರೀ ಅಗತ್ಯಗಳಿಗೆ ಸರಕಾರೀ ಸಾರಿಗೆಯ ಮೇಲೆ ಬಹಳಷ್ಟು ಅವಲಂಬಿತರಾಗಿದ್ದಾರೆ. ರಸ್ತೆಗಳ ದುಸ್ಥಿತಿಯಿಂದ ಮತ್ತು ಪಾರ್ಕಿಂಗ್ ಮಾಡಲು ಸ್ಥಳದ ಅಭಾವದಿಂದ ಖಾಸಗೀ ವಾಹನಗಳು ಅಷ್ಟಾಗಿ ಜನಪ್ರಿಯವಾಗಿಲ್ಲ. ಆದರೂ ಈಚೀಚೆಗೆ, ಲೋಕಲ್ ರೈಲಿನಲ್ಲಿಯ ಸಹಿಸಲಸಾಧ್ಯ ಜನದಟ್ಟಣೆಯಿಂದ ಬೇಸತ್ತ ಜನ ಸ್ವಂತ ವಾಹನದ ಮೊರೆ ಹೋಗುವ ಪ್ರವೃತ್ತಿಯೂ ಕಾಣಬರುತ್ತಿದೆ. ಸುಮಾರು ೩೫ ಲಕ್ಷಜನ ಲೋಕಲ್ ರೈಲಿನಲ್ಲಿ ಪ್ರತಿದಿನ, ಪ್ರಯಾಣಮಾಡುತ್ತಾರೆಂಬ ದಾಖಲೆ ಇದೆ. ಲೋಕಲ್ ರೈಲುಗಳು ಮುಂಬಯಿ ಜನಜೀವನದ ಜೀವನಾಡಿ ಎಂದು ಹೇಳಲು ಅಡ್ಡಿಯಿಲ್ಲ. ಪಶ್ಚಿಮ ಮತ್ತು ಮಧ್ಯ ರೈಲ್ವೆಗಳ ಕೇಂದ್ರ ಕಛೇರಿಗಳು ಮುಂಬಯಿಯಲ್ಲವೆ. (contracted; show full)* [http://www.bombay-india.net/ ಮುಂಬಯಿ ನಗರ ಮಾರ್ಗದರ್ಶಿ ] * [http://thegreatindian.tripod.com/mumbai.htm ಮುಂಬಯಿ ನಗರದ ಪಕ್ಷಿನೋಟ ( ಅಪರೂಪದ ಫೋಟೋ)] {{ಭಾರತದ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ರಾಜಧಾನಿಗಳು}} [[ವರ್ಗ:ಮಹಾರಾಷ್ಟ್ರದ ಪಟ್ಟಣಗಳು]] [[ವರ್ಗ:ಭಾರತದ ಪಟ್ಟಣಗಳು]] [[ವರ್ಗ:ಭೂಗೋಳ]] All content in the above text box is licensed under the Creative Commons Attribution-ShareAlike license Version 4 and was originally sourced from https://kn.wikipedia.org/w/index.php?diff=prev&oldid=859694.
![]() ![]() This site is not affiliated with or endorsed in any way by the Wikimedia Foundation or any of its affiliates. In fact, we fucking despise them.
|